×
Ad

ಪರೀಕ್ಷೆ ಬರೆಯಲು ಬಂದ ಖ್ಯಾತ ನಟಿ ಸಾಯಿಪಲ್ಲವಿ: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

Update: 2020-09-02 15:18 IST

ಚೆನ್ನೈ: ‘ಪ್ರೇಮಂ’ ಖ್ಯಾತಿಯ ನಟಿ ಸಾಯಿ ಪಲ್ಲವಿ ಸೋಮವಾರ ತಿರುಚ್ಚಿಯ ಎಂಎಎಂ ಕಾಲೇಜಿಗೆ ಪರೀಕ್ಷೆಯೊಂದನ್ನು ಬರೆಯಲು ಹಾಜರಾಗಿದ್ದಾರೆ. ಜಾರ್ಜಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿರುವ ಸಾಯಿ ಪಲ್ಲವಿ ಭಾರತದಲ್ಲಿ ವೈದ್ಯಕೀಯ ವೃತ್ತಿ ನಡೆಸಲು ಫಾರಿನ್ ಮೆಡಿಕಲ್ ಗ್ರಾಜುವೇಟ್ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳಬೇಕಿದೆ.

ಮಾಸ್ಕ್ ಧರಿಸಿಯೇ ಸಾಯಿ ಪಲ್ಲವಿ ಪರೀಕ್ಷೆಗೆ ಹಾಜರಾಗಿದ್ದರೂ ಅಭಿಮಾನಿಗಳು ಅವರನ್ನು ಗುರುತಿಸಿ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ಜಾರ್ಜಿಯಾದ  ತಬ್ಲಿಸಿ ಮೆಡಿಕಲ್ ಯುಇನಿವರ್ಸಿಟಿಯಲ್ಲಿ ವೈದ್ಯಕೀಯ ಪದವಿಯನ್ನು 2016ರಲ್ಲಿ ಸಾಯಿ ಪಲ್ಲವಿ ಪಡೆದಿದ್ದರು. ಭಾರತದಿಂದ ಹೊರಗೆ ವೈದ್ಯಕೀಯ ಶಿಕ್ಷಣ ಪಡೆದವರು ಭಾರತದಲ್ಲಿ ವೈದ್ಯಕೀಯ ವೃತ್ತಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಎಫ್‍ಎಂಜಿಇ ಪರೀಕ್ಷೆಗೆ ಹಾಜರಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News