ಕೊರೋನ ಸೋಂಕಿನಿಂದ ಮರಣ ಹೊಂದಿದವರಲ್ಲಿ 51% ಹಿರಿಯ ನಾಗರಿಕರು: ಆರೋಗ್ಯ ಇಲಾಖೆ

Update: 2020-09-02 13:59 GMT

ಹೊಸದಿಲ್ಲಿ, ಸೆ.2: ಒಟ್ಟು ಕೊರೋನ ಸೋಂಕಿತರಲ್ಲಿ 54% ರೋಗಿಗಳು 18ರಿಂದ 44 ವರ್ಷದವರಾಗಿದ್ದಾರೆ. ಕೊರೋನ ಸೋಂಕಿನಿಂದ ಮೃತರಾದವರಲ್ಲಿ 51% ಹಿರಿಯ ನಾಗರಿಕರು ಎಂದು ಆರೋಗ್ಯ ಇಲಾಖೆ ಬುಧವಾರ ಮಾಹಿತಿ ನೀಡಿದೆ.

ಬುಧವಾರ ಬೆಳಗ್ಗಿನವರೆಗಿನ 24 ಗಂಟೆಯ ಅವಧಿಯಲ್ಲಿ ದೇಶದಲ್ಲಿ 78,357 ಹೊಸ ಪ್ರಕರಣ ದಾಖಲಾಗಿದ್ದು ಒಟ್ಟು ಸೋಂಕು ಪ್ರಕರಣ 37,69,523ಕ್ಕೆ ತಲುಪಿದೆ. ಇದೇ ವೇಳೆ ಚೇತರಿಕೆ ಪ್ರಕರಣ 29,01,908ಕ್ಕೆ ತಲುಪಿದ್ದು ಚೇತರಿಕೆ ಪ್ರಮಾಣ 76.98% ಆಗಿದೆ ಎಂದು ಇಲಾಖೆ ಹೇಳಿದೆ. ಮರಣ ಹೊಂದಿದವರಲ್ಲಿ 51% ರೋಗಿಗಳು 60 ವರ್ಷ ಮತ್ತು ಮೇಲ್ಪಟ್ಟ ವಯೋಮಾನದ ಹಿರಿಯ ನಾಗರಿಕರು ಎಂದು ಇಲಾಖೆ ಹೇಳಿದೆ.

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು, ಹ್ಯಾಂಡ್ ವಾಶ್, ಸ್ಯಾನಿಟೈಸರ್ ಬಳಕೆ, ಕೆಮ್ಮುವಾಗ ಶಿಷ್ಟತೆ ಪಾಲನೆ ಮುಂತಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ. ಈ ಮಧ್ಯೆ, ಭಾರತದಲ್ಲಿ ವ್ಯಾಪಕ ಮಾಸ್ಕ್ ಬಳಕೆ, ಸುರಕ್ಷಿತ ಅಂತರ ಪಾಲಿಸುತ್ತಿರುವುದರಿಂದ ಡಿಸೆಂಬರ್‌ವರೆಗಿನ ಅಂದಾಜಿನಂತೆ ದೇಶದಲ್ಲಿ ಕೊರೋನ ಸಂಬಂಧಿತ ಸಾವಿನ ಪ್ರಕರಣ 2 ಲಕ್ಷದಷ್ಟು ಕಡಿಮೆಯಾಗಲಿದೆ ಎಂದು ಅಮೆರಿಕದ ವಾಷಿಂಗ್ಟನ್ ವಿವಿಯ ಆರೋಗ್ಯ ಮಾಪನ ಮತ್ತು ವೌಲ್ಯಮಾಪನಕ್ಕಾಗಿನ ಸಂಸ್ಥೆಯ ವರದಿ ತಿಳಿಸಿದೆ. ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದರೆ ಭಾರತದಲ್ಲಿ ಕೊರೋನದ ಮೇಲೆ ಇನ್ನಷ್ಟು ನಿಯಂತ್ರಣ ಸಾಧಿಸಲು ಅವಕಾಶವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News