ಬಿಸಿಸಿಐ ಅಂಗಸಂಸ್ಥೆಗಳಿಗೆ ಜುಲೆನಲ್ಲಿ 46.89 ಕೋಟಿ ರೂ. ಪಾವತಿ

Update: 2020-09-05 04:30 GMT

ಹೊಸದಿಲ್ಲಿ, ಸೆ. 4: ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆಯ ಕಾರಣದಿಂದಾಗಿ ವಿಶ್ವ ಆರ್ಥಿಕತೆಯು ನೆಲಕಚ್ಚಿರುವ ನಡುವೆಯೂ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಂಗಸಂಸ್ಥೆಗಳು ಮತ್ತು ಕಕ್ಷಿದಾರರಿಗೆ 46.89 ಕೋಟಿ ರೂ.ಗಳನ್ನು ಪಾವತಿಸಿದೆ.

ಆದಾಯ ತೆರಿಗೆ ಮತ್ತು ಜಿಎಸ್‌ಟಿಯನ್ನು ಕೂಡಾ ಇದರ ಜೊತೆಗೆ ಪಾವತಿಸಿರುವುದಾಗಿ ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತವರು ರಾಜ್ಯವಾಗಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ (ಎಚ್‌ಪಿಸಿಎ) 16.20 ಕೋಟಿ ರೂ. ಮುಂಗಡ ಹಣ ಪಡೆದಿರುವುದು ವಿಶೇಷ. ಎರಡನೇ ಅತಿದೊಡ್ಡ ಭಾಗವು ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಜೆಎಸ್‌ಸಿಎ) ತಾತ್ಕಾಲಿಕ ಮುಂಗಡ ಹಣ 10.80 ಕೋಟಿ ರೂ. ಪಾವತಿಸಲಾಗಿದೆ. ಜಿಎಸ್‌ಟಿಯಾಗಿ 54 ಲಕ್ಷ ರೂ. ಬಿಸಿಸಿಐ ಪಾವತಿಸಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News