ಬಾಬರಿ ಮಸೀದಿಯಷ್ಟೇ ದೊಡ್ದದಾಗಿರಲಿದೆ ಅಯೋಧ್ಯೆಯ ಮಸೀದಿ

Update: 2020-09-05 12:51 GMT

ಲಕ್ನೋ: ಸುಪ್ರೀಂ ಕೋರ್ಟ್ ತೀರ್ಪಿನಂತೆ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಯು ಮೂಲ ಬಾಬರಿ ಮಸೀದಿಯಷ್ಟೇ ದೊಡ್ದದಾಗಿರಲಿದೆ ಎಂದು ಮಸೀದಿ ನಿರ್ಮಾಣಕ್ಕಾಗಿ ರಚಿಸಲಾದ ಟ್ರಸ್ಟಿನ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಮಸೀದಿಗಾಗಿ ಅಯ್ಯೋಧ್ಯೆಯ ಧನ್ನಿಪುರ್ ಗ್ರಾಮದಲ್ಲಿ  ಒದಗಿಸಲಾಗಿರುವ ಐದು ಎಕರೆ ಸಂಕೀರ್ಣದಲ್ಲಿ ಒಂದು ಆಸ್ಪತ್ರೆ, ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯ ಅಲ್ಲಿನ ಇಂಡೋ-ಇಸ್ಲಾಮಿಕ್ ರಿಸರ್ಚ್ ಸೆಂಟರ್ ಭಾಗವಾಗಲಿವೆ.

ಮಸೀದಿಯು 15,000 ಚದರ ಅಡಿ ವಿಸ್ತೀರ್ಣ ಹೊಂದಲಿದ್ದರೆ ಉಳಿದ ಸ್ಥಳಗಳಲ್ಲಿ ಗ್ರಂಥಾಲಯ, ಆಸ್ಪತ್ರೆ ಹಾಗೂ ವಸ್ತುಸಂಗ್ರಹಾಲಯ ನಿರ್ಮಾಣವಾಗಲಿದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಮತ್ತು ವಕ್ತಾರರಾದ ಅತ್ತರ್ ಹುಸೈನ್ ತಿಳಿಸಿದ್ದಾರೆ.

ಈ ಯೋಜನೆಗೆ  ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರೊಫೆಸರ್ ಎಸ್ ಎಂ ಅಖ್ತರ್ ಅವರು ಕನ್ಸಲ್ಟೆಂಟ್ ಆರ್ಕಿಟೆಕ್ಟ್ ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News