ಕನಿಷ್ಠ ಸರಕಾರ, ಗರಿಷ್ಠ ಖಾಸಗೀಕರಣ ಮೋದಿ ಸರಕಾರದ ನೀತಿ: ರಾಹುಲ್ ಟೀಕೆ

Update: 2020-09-05 14:54 GMT

ಹೊಸದಿಲ್ಲಿ, ಸೆ.5: ಖರ್ಚು ವೆಚ್ಚ ವಿಭಾಗದ ಅನುಮೋದನೆ ಹೊರತುಪಡಿಸಿ ಸರಕಾರಿ ಉದ್ಯೋಗಗಳಿಗೆ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವುದನ್ನು ತಡೆಹಿಡಿಯಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂಬ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕನಿಷ್ಟ ಸರಕಾರ, ಗರಿಷ್ಟ ಖಾಸಗೀಕರಣ ಎಂಬುದು ಮೋದಿ ಸರಕಾರದ ನೀತಿಯಾಗಿದೆ ಎಂದು ಟೀಕಿಸಿದ್ದಾರೆ.

ಸರಕಾರಿ ಕಚೇರಿಗಳಲ್ಲಿ ಖಾಯಂ ಸಿಬ್ಬಂದಿ ಇರಬಾರದು ಎಂಬ ನಿರ್ಧಾರಕ್ಕೆ ಬಂದಿರುವ ಕೇಂದ್ರ ಸರಕಾರ, ಒಂದೊಂದೇ ಇಲಾಖೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಇದಕ್ಕೆ ಕೊರೋನ ಸೋಂಕು ಕೇವಲ ಒಂದು ನೆಪವಾಗಿದೆಯಷ್ಟೇ. ದೇಶದ ಯುವಜನತೆಯ ಭವಿಷ್ಯವನ್ನು ಕಿತ್ತುಕೊಂಡು, ತನ್ನ(ಮೋದಿಯ) ಸ್ನೇಹಿತರ ಭವಿಷ್ಯವನ್ನು ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News