ಫ್ಲ್ಯಾಟ್‌ನಲ್ಲಿ ಥಾಯ್ ಲ್ಯಾಂಡ್ ಮಹಿಳೆಯ ಸುಟ್ಟು ಕರಕಲಾದ ಮೃತದೇಹ ಪತ್ತೆ

Update: 2020-09-06 15:49 GMT

ಗಾಂಧಿನಗರ, ಸೆ. 6: ಥಾಯ್ ಲ್ಯಾಂಡ್‌ನ ಮಹಿಳೆಯೋರ್ವರ ಸುಟ್ಟು ಕರಕಲಾದ ಮೃತದೇಹ ಗುಜರಾತ್‌ನ ಸೂರತ್‌ನ ಮಗ್ಡಲ್ಲಾ ಪ್ರದೇಶದಲ್ಲಿರುವ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಶನಿವಾರ ಹಾಗೂ ರವಿವಾರದ ನಡುವೆ ರಾತ್ರಿ ಎರಡನೇ ಮಹಡಿಯಲ್ಲಿರುವ ಬಾಡಿಗೆ ಫ್ಲ್ಯಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ನೆರೆಯವರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಫ್ಲ್ಯಾಟ್‌ನ ಬಾಗಿಲನ್ನು ಒಳಗಿನಿಂದ ಹಾಕಲಾಗಿತ್ತು. ಹತ್ಯೆಯೇ ಅಥವಾ ಆತ್ಮಹತ್ಯೆಯೇ ಎಂಬುದನ್ನು ದೃಢಪಡಿಸಲು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಎ.ಕೆ. ವರ್ಮಾ ಹೇಳಿದ್ದಾರೆ.

ಶನಿವಾರ ರಾತ್ರಿ 8.30ಕ್ಕೆ ಮಹಿಳೆಯೋರ್ವರು ಆಕೆಯನ್ನು ಭೇಟಿಯಾಗಿದ್ದಾರೆ ಎಂದು ನೆರೆಯವರು ತಿಳಿಸಿದ್ದಾರೆ. ಸಂತ್ರಸ್ತೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಥಾಯ್ ಲ್ಯಾಂಡ್‌ನಿಂದ ಸಂಗ್ರಹಿಸಲಾಗುತ್ತಿದೆ ಅಲ್ಲದೆ, ಬೀದಿಯ ಸಿಸಿಟಿವಿ ದೃಶ್ಯಾವಳಿಯನ್ನು ಕೂಡ ಸಂಗ್ರಹಿಸಲಾಗುತ್ತಿದೆ ಎಂದು ವರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News