ಕೊರೋನ ಸೋಂಕಿತ ತಾಯಿಯನ್ನು ಪಂಪ್‌ಶೆಡ್‌ಗೆ ಕಳುಹಿಸಿದ ಮಕ್ಕಳು !

Update: 2020-09-07 15:22 GMT

ಹೈದರಾಬಾದ್, ಸೆ.7: ಕೊರೋನ ಸೋಂಕು ದೃಢಪಟ್ಟ 82 ವರ್ಷದ ವೃದ್ಧೆಯನ್ನು ಮನೆಯ ಹೊರಗಿನ ಹೊಲದಲ್ಲಿರುವ ಪಂಪ್‌ಶೆಡ್‌ನಲ್ಲಿ ವಾಸಿಸುವಂತೆ ಮಹಿಳೆಯ ಗಂಡು ಮಕ್ಕಳು ಬಲವಂತಪಡಿಸಿದ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ವಾರಂಗಲ್‌ನ ವೆಲೆರು ಮಂಡಲದ ಪೀಚರ ಎಂಬ ಗ್ರಾಮದ ನಿವಾಸಿ 82 ವರ್ಷದ ಲಚ್ಚಮ್ಮ ಎಂಬ ವೃದ್ಧೆಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಸೋಂಕು ಹರಡಬಹುದೆಂಬ ಭೀತಿಯಲ್ಲಿ ಆಕೆಯ ನಾಲ್ವರು ಗಂಡು ಮಕ್ಕಳು ಹೊಲದಲ್ಲಿದ್ದ ಪಂಪ್‌ಶೆಡ್‌ನಲ್ಲಿ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡಿದ್ದಾರೆ. ವೃದ್ಧಾಪ್ಯದ ಕಾರಣ, ಲಚ್ಚಮ್ಮನಿಗೆ ನಡೆಯಲೂ ಕಷ್ಟವಾಗುತ್ತಿತ್ತು.

ತಾಯಿಯ ಪರಿಸ್ಥಿತಿಯ ಬಗ್ಗೆ ತಿಳಿದ ಮಗಳು ತಕ್ಷಣ ಗ್ರಾಮಕ್ಕೆ ತೆರಳಿ ಲಚ್ಚಮ್ಮನನ್ನು ತನ್ನೊಂದಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News