ಟಿ.ವಿ. ನಟಿ ಸ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

Update: 2020-09-09 14:56 GMT

ಹೈದರಾಬಾದ್, ಸೆ. 9: ತೆಲುಗು ಟಿ.ವಿ. ನಟಿ ಸ್ರಾವಣಿ ಕೊಂಡಪಲ್ಲಿ (26) ಅವರ ಮೃತದೇಹ ಹೈದರಾಬಾದ್‌ನ ಮಧುರನಗರದಲ್ಲಿರುವ ಫ್ಲಾಟ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಂಗಳವಾರ ರಾತ್ರಿ ಪತ್ತೆಯಾಗಿದೆ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯವರಾದ ಸ್ರಾವಣಿ ಕಳೆದ 8 ವರ್ಷಗಳಿಂದ ತೆಲುಗಿನ ಹಲವು ಟೆಲಿವಿಷನ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸ್ರಾವಣಿ ಅವರದ್ದು ಆತ್ಮಹತ್ಯೆ ಅಲ್ಲ ಎಂದು ಅವರ ಕುಟುಂಬ ಆರೋಪಿಸಿದೆ. ಟಿಕ್‌ಟಾಕ್‌ನಿಂದ ಗೆಳೆಯನಾಗಿದ್ದ ದೇವರಾಜ್ ಎಂಬವರೊಂದಿಗೆ ಸ್ರಾವಣಿ ತುಂಬಾ ಆತ್ಮೀಯರಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದೇವರಾಜ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಸ್ರಾವಣಿಯ ಸಹೋದರ, ಹಣ ನೀಡುವಂತೆ ಸ್ರಾವಣಿ ಮೇಲೆ ದೇವರಾಜ್ ಒತ್ತಡ ಹೇರುತ್ತಿದ್ದ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News