ಶ್ರೀನಗರದ ಸರಕಾರಿ ಮನೆ ತ್ಯಜಿಸಲಿದ್ದೇನೆ: ಉಮರ್ ಅಬ್ದುಲ್ಲಾ

Update: 2020-09-09 16:02 GMT

ಶ್ರೀನಗರ, ಸೆ. 7: ಅಕ್ಟೋಬರ್ ಅಂತ್ಯದ ಮುನ್ನ ಶ್ರೀನಗರದ ತನ್ನ ಸರಕಾರಿ ಮನೆಯಿಂದ ತೆರವುಗೊಳ್ಳಲಿದ್ದೇನೆ ಎಂದು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಬುಧವಾರ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿ ಜುಲೈಯಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ಬರೆದ ಪತ್ರವನ್ನು ಉಮರ್ ಅಬ್ದುಲ್ಲಾ ಅವರು ಹಂಚಿಕೊಂಡಿದ್ದಾರೆ. ‘‘ಈ ತಿಂಗಳ ಅಂತ್ಯದ ಒಳಗೆ ಶ್ರೀನಗರದಲ್ಲಿರುವ ನನ್ನ ಸರಕಾರಿ ಮನೆಯಿಂದ ತೆರವುಗೊಳ್ಳಲಿದ್ದೇನೆ. ಕಳೆದ ವರ್ಷ ಮಾಧ್ಯಮಗಳಲ್ಲಿ ವಾಸ್ತವಕ್ಕೆ ವ್ಯತಿರಿಕ್ತವಾದ ವರದಿ ಪ್ರಕಟವಾಗಿತ್ತು. ಸರಕಾರಿ ಮನೆ ತೆರವುಗೊಳಿಸುವಂತೆ ನನಗೆ ಯಾವುದೇ ನೋಟಿಸು ಬಂದಿಲ್ಲ. ನಾನು ಸ್ವಂತ ಇಚ್ಚೆಯಿಂದ ವಾಸ್ತವ್ಯ ತೆರವುಗೊಳಿಸಲು ನಿರ್ಧರಿಸಿದ್ದೇನೆ’’ ಎಂದು ಅಬ್ದುಲ್ಲಾ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

 ಅಲ್ಲದೆ, ತನ್ನ ಪತ್ರದ ಫೊಟೋವನ್ನು ಹಂಚಿಕೊಂಡಿದ್ದಾರೆ. ತಾನು ಶ್ರೀನಗರ ಕ್ಷೇತ್ರದ ಸಂಸದನಾಗಿದ್ದಾಗ 2002ರಲ್ಲಿ ಗುಪ್ಕಾರ್ ರಸ್ತೆಯ ಶ್ರೀನಗರದ ವಿವಿಐಪಿ ಪ್ರದೇಶದಲ್ಲಿ ಮನೆ ಮುಂಜೂರು ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News