ಲಾಕ್ ಡೌನ್ ಸಂದರ್ಭ ನಿರ್ಮಾಣಗೊಂಡ 'ಸಿ ಯು ಸೂನ್' ಥ್ರಿಲ್ಲರ್ ಸಿನೆಮಾದ ಹಿಂದಿನ ರೋಚಕ ಕಥೆ

Update: 2020-09-10 05:56 GMT

ತಿರುವನಂತಪುರಂ: ಎಪ್ರಿಲ್ ತಿಂಗಳಿನಲ್ಲಿ ಇಡೀ ಭಾರತ ಕೋವಿಡ್ ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್‍ನಲ್ಲಿದ್ದಾಗ ಮಲಯಾಳಂ ಚಿತ್ರ ತಯಾರಕ ಮಹೇಶ್ ನಾರಾಯಣನ್ ಅವರು ಮಾತ್ರ ಸುಮ್ಮನೆ ಕೂರದೆ ತಮ್ಮ ಮುಂದಿನ ಚಿತ್ರವನ್ನು ನಿರ್ಮಿಸಿಯೇ ಬಿಟ್ಟಿದ್ದರು. "ಸಿ ಯು ಸೂನ್'' ಎಂಬ ಹೆಸರಿನ ಅವರ ಈ 90 ನಿಮಿಷ ಅವಧಿಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ತಯಾರಿಯ ಹಿಂದಿನ ಕಥೆ ರೋಚಕ.

ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹೀಗೆ ಎಲ್ಲ ಹೊಣೆಯನ್ನು ತಾವೇ ಹೊತ್ತುಕೊಂಡ ಅವರು 50 ಜನರ ಚಿತ್ರತಂಡವನ್ನು ಸೇರಿಸುವಲ್ಲಿ ಸಫಲರಾದರು.  ಕೊಚ್ಚಿಯ ಒಂದು ಕಟ್ಟಡದ ಆರು ಅಪಾಟ್‍ಮೆಂಟ್‍ಗಳಲ್ಲಿ ಮೂರು ವಾರಗಳಲ್ಲಿ ಚಿತ್ರೀಕರಣ ನಡೆಸಲಾಯಿತು. ಚಿತ್ರದ ನಾಯಕನಟ ಹಾಗೂ ನಿರ್ಮಾಪಕ ಫಹದ್ ಫಾಝಿಲ್ ಅವರ ಶ್ರಮದಿಂದ ಅವರ ಒಡೆತನದ ಎರಡು ಅಪಾರ್ಟ್ ಮೆಂಟ್‍ಗಳು ಬಳಕೆಯಾದರೆ ಉಳಿದವುಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಯಿತು.ಈ ಅಪಾರ್ಟ್ ಮೆಂಟ್ ಗಳೇ ಚಿತ್ರದ ಸೆಟ್, ಕಚೇರಿ ಹಾಗೂ ಚಿತ್ರತಂಡದ ಮನೆಗಳಾಗಿ ಬಿಟ್ಟವು.

ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಂಡು ಐಫೋನ್ ಬಳಸಿ ಚಿತ್ರೀಕರಣ ನಡೆಸಿ 22 ವಾರಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ.

ಕಳೆದ ವಾರ ಅಮೆಝಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಗೊಂಡಿರುವ ಈ ಚಿತ್ರದಲ್ಲಿ ಯಾವುದೇ ಹಾಡು ಯಾ ನೃತ್ಯವಿಲ್ಲ. ಹೊರಾಂಗಣ ಚಿತ್ರೀಕರಣ ಅಗತ್ಯವಿದ್ದಾಗ ನಾರಾಯಣನ್ ತಮ್ಮದೇ ಹಿಂದಿನ ಚಿತ್ರಗಳ ದೃಶ್ಯಾವಳಿ ಬಳಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News