ಸುನಂದಾ ಪುಷ್ಕರ್ ಸಾವು ಪ್ರಕರಣದ ಪರ್ಯಾಯ ತನಿಖೆ: ಅರ್ನಬ್ ಗೋಸ್ವಾಮಿಗೆ ದಿಲ್ಲಿ ಹೈಕೋರ್ಟ್ ತರಾಟೆ

Update: 2020-09-10 17:07 GMT

ಹೊಸದಿಲ್ಲಿ, ಸೆ. 10: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದ ಕುರಿತು ಪರ್ಯಾಯ ತನಿಖೆ ಹಾಗೂ ವಿಚಾರಣೆ ನಡೆಸುತ್ತಿರುವ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ತರಾಟೆಗೆ ತೆಗೆದುಕೊಂಡಿದೆ ಮಾಧ್ಯಮವನ್ನು ಯಾರೋ ತಮಾಷೆ ಮಾಡುತ್ತಾರೆ ಎಂದು ನ್ಯಾಯಾಲಯ ಹೇಳುವುದಿಲ್ಲ. ಆದರೆ, ಇದೇ ಸಂದರ್ಭ ತನಿಖೆಯ ಗೌರವವನ್ನು ಕಾಯ್ದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ಹೇಳಿದರು.

 ‘‘ದಯವಿಟ್ಟು ಸಂಯಮ ಪ್ರದರ್ಶಿಸಿ. ಒಂದು ಬಾರಿ ಪೊಲೀಸರು ಕ್ರಿಮಿನಲ್ ಪ್ರಕರಣದ ತನಿಖೆ ಆರಂಭಿಸಿದ ಬಳಿಕ ಮಾದ್ಯಮ ಪರ್ಯಾಯ ತನಿಖೆ ನಡೆಸಲು ಸಾಧ್ಯವಿಲ್ಲ’’ ಎಂದು ಮುಕ್ತಾ ಗುಪ್ತಾ ಹೇಳಿದ್ದಾರೆ.

ಮಾಧ್ಯಮ ಯಾರೊಬ್ಬರನ್ನು ಅಪರಾಧಿ ಎಂದು ಹೇಳಲು ಸಾಧ್ಯವಿಲ್ಲ ಅಥವಾ ಆಧಾರ ರಹಿತವಾಗಿ ಪ್ರತಿಪಾದಿಸಿ ಯಾರೊಬ್ಬರನ್ನೂ ತಪ್ಪು ಮಾಡಿದ್ದಾರೆ ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ. ತನಿಖೆ ಅಥವಾ ವಿಚಾರಣೆ ಬಾಕಿ ಇರುವ ಪ್ರಕರಣಗಳ ಕುರಿತು ಮಾದ್ಯಮಗಳು ಎಚ್ಚರಿಕೆಯಿಂದ ವರದಿ ಮಾಡಬೇಕು ಎಂದು 2017 ಡಿಸೆಂಬರ್ 1ರ ನ್ಯಾಯಾಲಯದ ಆದೇಶವನ್ನು ಉಚ್ಚ ನ್ಯಾಯಾಲಯ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News