×
Ad

ಹಿರಿಯ ಗಾಯಕಿ ಅನುರಾಧಾ ಪೌದ್ವಾಲ್‌ರ ಪುತ್ರ ನಿಧನ

Update: 2020-09-12 14:36 IST

ಮುಂಬೈ, ಸೆ.12: ಹಿರಿಯ ಹಿನ್ನೆಲೆ ಗಾಯಕಿ ಅನುರಾಧಾ ಪೌದ್ವಾಲ್ ಪುತ್ರ, ಸಂಗೀತ ನಿರ್ದೇಶಕ ಆದಿತ್ಯ ಪೌದ್ವಾಲ್ ಮುಂಬೈ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು ಅವರಿಗೆ 35 ವರ್ಷ ವಯಸ್ಸಾಗಿತ್ತು.

"ಆದಿತ್ಯಗೆ ಈಗ ಕೇವಲ 35 ವರ್ಷ. ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಮಾರು ವರ್ಷದ ಹಿಂದೆಯೇ ಅವರಿಗೆ ಅನಾರೋಗ್ಯ ಕಾಡಿತ್ತು. ಆದರೆ ಅದರಿಂದ ಅವರು ಚೇತರಿಸಿಕೊಂಡಿದ್ದರು. ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದ ಅವರಿಗೆ ಕಿಡ್ನಿಗಳು ವಿಫಲವಾಗಿದ್ದವು. ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯ ಐಸಿಯುನಲ್ಲಿದ್ದರು. ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಇದೊಂದು ಬೇಸರದ ವಿಚಾರ'' ಎಂದು ಖ್ಯಾತ ಗಾಯಕ ಶಂಕರ್ ಮಹದೇವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News