×
Ad

ಒರೆಗಾನ್ ಕಾಡ್ಗಿಚ್ಚು: ಮೃತರ ಸಂಖ್ಯೆ 24ಕ್ಕೆ ಏರಿಕೆ

Update: 2020-09-12 21:09 IST
ಸಾಂದರ್ಭಿಕ ಚಿತ್ರ

ಮೊಲಾಲ (ಒರೆಗಾನ್), ಸೆ. 12: ಅಮೆರಿಕದ ಪಶ್ಚಿಮ ಕರಾವಳಿಯ ರಾಜ್ಯಗಳಲ್ಲಿ ದಾಂಧಲೆಗೈಯುತ್ತಿರುವ ಭೀಕರ ಕಾಡಿನ ಬೆಂಕಿಗೆ ಶುಕ್ರವಾರದವರೆಗೆ 24 ಮಂದಿ ಬಲಿಯಾಗಿದ್ದಾರೆ. ಆಗಸ್ಟ್‌ನಲ್ಲಿ ಹೊತ್ತಿಕೊಂಡಿರುವ ಬೆಂಕಿಯು ಇನ್ನೂ ಮುಂದುವರಿಯುತ್ತಿದ್ದು, ಒರೆಗಾನ್ ರಾಜ್ಯದಲ್ಲಿ ಸುಮಾರು 5 ಲಕ್ಷ ಮಂದಿ ಮನೆಗಳನ್ನು ತೊರೆಯಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಒರೆಗಾನ್‌ನ ಅತಿ ದೊಡ್ಡ ನಗರ ಮೊಲಾಲದ ನಿವಾಸಿಗಳಿಗೆ ತೆರವುಗೊಳ್ಳಲು ಸಿದ್ಧರಾಗಿರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಅಮೆರಿಕದ ಪಶ್ಚಿಮ ಭಾಗದಲ್ಲಿ ಹೊತ್ತಿಕೊಂಡಿರುವ ಸುಮಾರು 100 ಕಾಡ್ಗಿಚ್ಚು ಪ್ರಕರಣಗಳು ಸುಮಾರು ನ್ಯೂಜರ್ಸಿ ರಾಜ್ಯದಷ್ಟು ಗಾತ್ರದ ಪ್ರದೇಶವನ್ನು ಆಕ್ರಮಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News