ಪಂಜಾಬ್‌ನ ಭಾರತ-ಪಾಕ್ ಗಡಿಯಲ್ಲಿ ಶಸ್ತ್ರಾಸ್ತ್ರ, ಸ್ಫೋಟಕ ಪತ್ತೆ

Update: 2020-09-12 17:56 GMT

ಚಂಡಿಗಡ, ಸೆ. 12: ಮೂರು ಎಕೆ 47 ಹಾಗೂ 2 ಎಂ-16 ರೈಫಲ್‌ಗಳು ಸೇರಿದಂತೆ ಶಸ್ತ್ರಾಸ್ತ್ರ ಹಾಗೂ ಸ್ಫೋಟಕದ ಸಂಗ್ರಹವನ್ನು ಗಡಿ ಭದ್ರತಾ ಪಡೆ ಪಂಜಾಬ್‌ನ ಫಿರೋಝ್‌ಪುರ ಜಿಲ್ಲೆಯ ಭಾರತ-ಪಾಕ್ ಗಡಿಯ ಹೊಲವೊಂದರಲ್ಲಿ ಶನಿವಾರ ಪತ್ತೆ ಮಾಡಿದೆ.

ಶೋಧ ಕಾರ್ಯಾಚರಣೆ ಸಂದರ್ಭ ಗಡಿ ಭದ್ರತಾ ಪಡೆಯ ತಂಡ ಗಡಿ ಸಮೀಪ ಇರುವ ಹೊಲದಲ್ಲಿ ಬೆಳಗ್ಗೆ 7 ಗಂಟೆಗೆ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಒಳಗೊಂಡಿರುವ ಚೀಲವನ್ನು ಪತ್ತೆ ಮಾಡಿತು.

ಇದರಲ್ಲಿ ಎಕೆ 47ನ 6 ಮ್ಯಾಗಝಿನ್‌ಗಳು, ಎಂ-16 ರೈಫಲ್ಸ್‌ನ 4 ಮ್ಯಾಗಝಿನ್‌ಗಳು, 4 ಮ್ಯಾಗಝಿನ್‌ಗಳೊಂದಿಗೆ ಎರಡು ಪಿಸ್ತೂಲ್‌ಗಳನ್ನು ಕೂಡ ಈ ಚೀಲದಲ್ಲಿ ಪತ್ತೆ ಮಾಡಿದೆ.

   ದೇಶ ವಿರೋಧಿ ಶಕ್ತಿಗಳು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಅಬೋಹಾರ್‌ನ ಅಂತಾರಾಷ್ಟ್ರೀಯ ಗಡಿಯ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ರವಾನಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News