ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ

Update: 2020-09-12 18:01 GMT

 ಹೊಸದಿಲ್ಲಿ, ಸೆ. 12: ಡೀಸೆಲ್ ಬೆಲೆ ಶನಿವಾರ ಪ್ರತಿ ಲೀಟರ್‌ಗೆ 73 ರೂಪಾಯಿಗಿಂತ ಕೆಳಗೆ ಇಳಿಕೆಯಾಗಿದೆ. ಪೆಟ್ರೋಲ್ ಬೆಲೆ 6 ತಿಂಗಳಲ್ಲಿ ಎರಡನೇ ಬಾರಿ ಇಳಿಕೆಯಾಗಿದೆ ಎಂದು ರಾಜ್ಯ ಸ್ವಾಮಿತ್ವದ ತೈಲ ರಿಟೈಲ್ ವ್ಯಾಪಾರಿಗಳು ಹೇಳಿದ್ದಾರೆ.

ಪೆಟ್ರೋಲ್ ಬೆಲೆ ಶನಿವಾರ ಪ್ರತಿ ಲೀಟರ್‌ಗೆ 13 ಪೈಸೆ ಇಳಿಕೆಯಾಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 12 ಪೈಸೆ ಇಳಿಕೆಯಾಗಿದೆ ಎಂದು ತೈಲ ರಿಟೈಲ್ ವ್ಯಾಪಾರಿಗಳ ಅಧಿಸೂಚನೆ ತಿಳಿಸಿದೆ.

ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 81.99 ರೂಪಾಯಿಯಿಂದ 81.86 ರೂಪಾಯಿಗೆ ಇಳಿಕೆಯಾಗಿದೆ. ಇದು ಮೂರು ದಿನಗಳಲ್ಲಿ ಎರಡನೇ ಬಾರಿ ಬೆಲೆ ಇಳಿಕೆ. ಪೆಟ್ರೋಲ್ ಬೆಲೆ 6 ತಿಂಗಳ ಬಳಿಕ ಸೆಪ್ಟಂಬರ್ 10ರಂದು ಮೊದಲ ಬಾರಿಗೆ ಪ್ರತಿ ಲೀಟರ್‌ಗೆ 9 ಪೈಸೆ ಇಳಿಕೆಯಾಗಿದೆ.

 ದಿಲ್ಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 73.05 ರೂಪಾಯಿ ಇದ್ದುದು, 72.93 ರೂಪಾಯಿಗೆ ಇಳಿಕೆಯಾಗಿದೆ.

 ಡೀಸೆಲ್ ಬೆಲೆ ಮಾರ್ಚ್ ಮಧ್ಯಭಾಗದ ಬಳಿಕ ಸೆಪ್ಟಂಬರ್ 3ರಂದು ಮೊದಲ ಬಾರಿಗೆ ಇಳಿಕೆಯಾಗಿದೆ. ಅನಂತರ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 63 ಪೈಸೆ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News