ಮಾಸ್ಕ್‌ನಿಂದ ಕೊರೋನ ರೋಗನಿರೋಧಕ ಶಕ್ತಿ ಹೆಚ್ಚಳ?

Update: 2020-09-13 15:13 GMT

ಕ್ಯಾಲಿಫೋರ್ನಿಯ (ಅಮೆರಿಕ), ಸೆ. 13: ಮುಖಗವಸುಗಳು ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸುವ ಮೂಲಕ ಲಸಿಕೆ ಮಾದರಿಯ ಪರಿಣಾಮವನ್ನು ಬೀರಬಹುದಾಗಿದೆ ಹಾಗೂ ಕೋವಿಡ್-19 ಹರಡುವಿಕೆಯ ಗತಿಯನ್ನು ತಗ್ಗಿಸಬಹುದಾಗಿದೆ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಪರಿಣತರು ಹೇಳಿದ್ದಾರೆ.

ವಿಜ್ಞಾನಿಗಳು ಮುಖಗವಸು (ಮಾಸ್ಕ್)ಗಳನ್ನು ‘ವೇರಿಯೋಲೇಶನ್’ ಎಂಬ ಪ್ರಕ್ರಿಯೆಗೆ ಹೋಲಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಆರೋಗ್ಯವಂತ ವ್ಯಕ್ತಿಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಅವರನ್ನು ಸೋಂಕುಪೀಡಿತ ರೋಗಿಗಳ ಗಾಯದ ಮೇಲ್ಪದರದ ಚರ್ಮಕ್ಕೆ ಒಡ್ಡಲಾಗುತ್ತದೆ. ಸಿಡುಬಿಗೆ ಲಸಿಕೆಯನ್ನು ಕಂಡುಹಿಡಿಯುವ ಮೊದಲು ವೇರಿಯೋಲೇಶನನ್ನು ಅನುಸರಿಸಲಾಗುತ್ತಿತ್ತು.

ಕೋವಿಡ್ ಯುಗದಲ್ಲಿ ಮಾಸ್ಕ್ ಬಳಸುವುದು ಕೂಡ ಇಂಥದೇ ಫಲಿತಾಂಶವನ್ನು ನೀಡುತ್ತದೆ ಎಂದು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಮೋನಿಕಾ ಗಾಂಧಿ ಮತ್ತು ಜಾರ್ಜ್ ಡಬ್ಲ್ಯು. ರುದರ್‌ಫೋರ್ಡ್ ‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News