‘ನಾನು ಮಾದಕ ವ್ಯಸನಿಯಾಗಿದ್ದೆ’: ಕಂಗನಾರ ಹಳೆಯ ವಿಡಿಯೋ ವೈರಲ್

Update: 2020-09-13 16:13 GMT

ಹೊಸದಿಲ್ಲಿ: ತಾನು ಮಾದಕವ್ಯಸನಿಯಾಗಿದ್ದೆ ಎಂದು ನಟಿ ಕಂಗನಾ ರಾಣವತ್ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಮಾರ್ಚ್ ತಿಂಗಳಿನದ್ದು ಎನ್ನಲಾಗಿದೆ.

“ನಾನು ನನ್ನ ಮನೆಯಿಂದ ಓಡಿಹೋದ ಬಳಿಕ ನಾನು ಸಿನೆಮಾ ನಟಿ ಮತ್ತು ಮಾದಕ ವ್ಯಸನಿಯಾದೆ. ನನ್ನ ಬದುಕಿನಲ್ಲಿ ಹಲವು ಘಟನೆಗಳು ನಡೆಯುತ್ತಿದ್ದವು. ಇದೆಲ್ಲವೂ ನನ್ನ ಸಣ್ಣ ವಯಸ್ಸಿನಲ್ಲೇ ನಡೆಯಿತು” ಎಂದು ಕಂಗನಾ ವಿಡಿಯೋದಲ್ಲಿ ಹೇಳುತ್ತಾರೆ.

ಬಾಲಿವುಡ್ ಸೆಲೆಬ್ರಿಟಿಗಳಿಗೆ ಮಾದಕ ವಸ್ತುಗಳನ್ನು ಬಳಸುತ್ತಾರೆ ಎನ್ನುವ ಆರೋಪಗಳ ನಡುವೆ ಕಂಗನಾರ ಹಳೆಯ ವಿಡಿಯೋ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News