10 ನಿಮಿಷ ತಡ: 700 ಕಿ.ಮೀ. ಪ್ರಯಾಣಿಸಿದರೂ ನೀಟ್ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡ ವಿದ್ಯಾರ್ಥಿ

Update: 2020-09-14 09:25 GMT

ಪಾಟ್ನಾ: ಬಿಹಾರದ ದರ್ಭಾಂಗ ನಿವಾಸಿಯಾಗಿರುವ ಸಂತೋಷ್ ಕುಮಾರ್ ಯಾದವ್  ತನ್ನ ಊರಿನಿಂದ ಸುಮಾರು 700 ಕಿ.ಮೀ. ದೂರವಿರುವ ಕೊಲ್ಕತ್ತಾದ ನೀಟ್ ಕೇಂದ್ರಕ್ಕೆ ಹಾಜರಾಗಲು 24 ಗಂಟೆಗಳಿಗೂ ಹೆಚ್ಚು ಸಮಯ ಪ್ರಯಾಣಿಸಿದ್ದ. ಈ ನಡುವೆ ಎರಡು ಬಸ್ಸುಗಳನ್ನು ಬದಲಾಯಿಸಿ ಕೊನೆಗೆ ತನ್ನ ಪರೀಕ್ಷಾ ಕೇಂದ್ರ ತಲುಪಿದ್ದ. ಆದರೆ ಅದಾಗಲೇ ಹತ್ತು ನಿಮಿಷ ತಡವಾಗಿದ್ದರಿಂದ ಆತನಿಗೆ ಪರೀಕ್ಷೆಗೆ ಹಾಜರಾಗಲು ನಿಯಮದಂತೆ ಅನುಮತಿ ನೀಡಲಾಗಿಲ್ಲ.

“ನಾನು ಅಲ್ಲಿನ ಅಧಿಕಾರಿಗಳಲ್ಲಿ ಗೋಗರೆದರೂ ತಡವಾಗಿದ್ದರಿಂದ ಅನುಮತಿ ನೀಡಲು ಸಾಧ್ಯವಿಲ್ಲವೆಂದರು. ಪರೀಕ್ಷೆ ಎರಡು ಗಂಟೆಗೆ ಆರಂಭಗೊಂಡಿತ್ತು. ನಾನು ಅಲ್ಲಿಗೆ 1:40ಕ್ಕೆ ಆಗಮಿಸಿದ್ದೆ. ಆದರೆ ಅಲ್ಲಿ ಅಭ್ಯರ್ಥಿಗಳು 1:30ರೊಳಗೆ ಹಾಜರಾಗಬೇಕಿತ್ತು. ನಾನು ಒಂದು ವರ್ಷ ಕಳೆದುಕೊಂಡಿದ್ದೇನೆ'' ಎಂದು ಅವರು ಹೇಳಿದರು.

“ನಾನು ಶನಿವಾರ ಬೆಳಿಗ್ಗೆ 8 ಗಂಟೆಗೆ ನನ್ನ ಊರಿನಿಂದ ಮುಝಫ್ಫರಪುರಕ್ಕೆ ತೆರಳಿದೆ. ಅಲ್ಲಿಂದ ಪಾಟ್ನಾಗೆ  ಬಸ್‍ ನಲ್ಲಿ ತೆರಳಿದೆ ಆದರೆ  ಬಹಳಷ್ಟು ವಾಹನ ದಟ್ಟಣೆಯಿಂದ ಸುಮಾರು ಆರು ಗಂಟೆ ತಡವಾಯಿತು. ಪಾಟ್ನಾದಿಂದ ರಾತ್ರಿ 9 ಗಂಟೆಗೆ ಬೇರೊಂದು ಬಸ್ ಹತ್ತಿದೆ. ಬಸ್ ನಿಂದ ಸೀಯಲ್ದಾಹ್ ನಿಲ್ದಾಣ ಸಮೀಪ ಅಪರಾಹ್ನ 1:06ಕ್ಕೆ ಇಳಿದು ಟ್ಯಾಕ್ಸಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದೆ'' ಎಂದು ಯಾದವ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News