‘ಚೀನಾ ಕೆಣಕಿದರೆ ಪೂರ್ವ ಲಡಾಖ್ ನಲ್ಲಿ ಪೂರ್ಣ ಪ್ರಮಾಣದ ಯುದ್ಧಕ್ಕೆ ಸೇನೆ ಸಜ್ಜು'

Update: 2020-09-16 12:56 GMT

ಹೊಸದಿಲ್ಲಿ : ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಚೀನಾ ಯುದ್ಧ ಸ್ಥಿತಿಯನ್ನು ನಿರ್ಮಿಸಿದಲ್ಲಿ ಚಳಿಗಾಲದ ನಡುವೆಯೂ ಪೂರ್ಣಪ್ರಮಾಣದ ಯುದ್ಧಕ್ಕೆ ಭಾರತೀಯ ಸೇನೆ ಸಂಪೂರ್ಣವಾಗಿ ಸಜ್ಜಾಗಿದೆ. ಅತ್ಯುತ್ತಮ ತರಬೇತಿ ಪಡೆದ, ಸಾಕಷ್ಟು ಪೂರ್ವ ತಯಾರಿ ನಡೆಸಿದ ಹಾಗೂ ಮನೋಸ್ಥೈರ್ಯವುಳ್ಳ ಭಾರತೀಯ ಸೈನಿಕರನ್ನು ಚೀನಾದ ಸೇನೆಯು ಎದುರಿಸಬೇಕಿದೆ ಎಂದು ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್ ಬುಧವಾರ ಹೇಳಿಕೆ ನೀಡಿದೆ.

ಭಾರತೀಯ ಯೋಧರ ದೈಹಿಕ ಹಾಗೂ ಮಾನಸಿಕ ಕ್ಷಮತೆಗೆ ಹೋಲಿಸಿದಾಗ ಹೆಚ್ಚಾಗಿ ನಗರ ಪ್ರದೇಶದ ಚೀನಾದ ಸೈನಿಕರು ಇಂತಹ ಸ್ಥಿತಿಗಳಲ್ಲಿ ದೀರ್ಘಕಾಲ ನಿಯೋಜಿಸಲ್ಪಟ್ಟು ಇಷ್ಟೊಂದು ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿಲ್ಲ ಎಂದೂ ನಾರ್ದರ್ನ್ ಕಮಾಂಡ್ ಹೇಳಿಕೆ ತಿಳಿಸಿದೆ.

ಭಾರತ ಯುದ್ಧ ಸ್ಥಿತಿಗೆ ಸಂಪೂರ್ಣವಾಗಿ ಸನ್ನದ್ಧವಾಗಿಲ್ಲ ಹಾಗೂ ಚಳಿಗಾಲದಲ್ಲಿ ಅದು ಪರಿಣಾಮಕಾರಿಯಾಗಿ ಯುದ್ಧ ನಡೆಸುವ ಸಾಮರ್ಥ್ಯ ಹೊಂದಿಲ್ಲ ಎಂದು ಚೀನಾದ ಅಧಿಕೃತ ಗ್ಲೋಬಲ್ ಟೈಮ್ಸ್ ವರದಿಗೆ ಪ್ರತಿಕ್ರಿಯೆಯಾಗಿ ನಾರ್ದರ್ನ್ ಕಮಾಂಡ್ ಈ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News