ಚೆನ್ನೈ ಸೂಪರ್ ಕಿಂಗ್ಸ್ ನ್ನು ಧೋನಿ 4ನೇ ಐಪಿಎಲ್ ಪಯತ್ತ ಮುನ್ನಡೆಸುವರೇ?

Update: 2020-09-16 18:42 GMT

ದುಬೈ: ಮಹೇಂದ್ರ ಸಿಂಗ್ ಧೋನಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಪ್ಟೆಂಬರ್19 ರಂದು ಆರಂಭವಾಗುವ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ. ಈಗ ಅವರು ಭಾರತದ ಮಾಜಿ ಕ್ರಿಕೆಟಿಗರಾಗಿದ್ದಾರೆ. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್‌ನಲ್ಲಿ 1 ರನ್ ಅಂತರದಲ್ಲಿ ಸೋತು ನಾಲ್ಕನೇ ಬಾರಿ ಪ್ರಶಸ್ತಿ ಎತ್ತುವ ಅವಕಾಶ ವಂಚಿತಗೊಂಡಿತ್ತು. ಈ ಬಾರಿ ತಂಡ ಪ್ರಶಸ್ತಿಯ ಮೇಲೆ ಮತ್ತೆ ಕಣ್ಣಿಟ್ಟಿದೆ.

   ಕಳೆದ ತಿಂಗಳು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಧೋನಿ ಅವರಿಗೆ ಮುಂಬರುವ ಐಪಿಎಲ್ ಸುದೀರ್ಘ, ಶ್ರೇಷ್ಠ ವೃತ್ತಿಜೀವನದ ಹೊಸ ಅಧ್ಯಾಯವಾಗಿದೆ. ಅವರಿಗೆ ಭಾರತದ ತಂಡದಲ್ಲಿಭವಿಷ್ಯದ ಬಗ್ಗೆ ಇನ್ನು ಮುಂದೆ ಯಾವುದೇ ಚರ್ಚೆಗೆ ಅವಕಾಶ ಇರುವುದಿಲ್ಲ, ಈ ಕಾರಣದಿಂದಾಗಿ ಧೋನಿ ಅವರಿಗೆ ಯಾವುದೇ ಒತ್ತಡ ಇಲ್ಲ.

 39ರ ಹರೆಯದ ಧೋನಿ ಕಳೆದ ವರ್ಷ ಜುಲೈನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಆದರೆ ಅವರು ನೆಟ್‌ಗಳಲ್ಲಿ ಅತ್ಯುತ್ತಮ ಸ್ಪರ್ಶವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಅವರ ಬ್ಯಾಟಿಂಗ್ ವಿಧಾನವನ್ನು ತೀವ್ರವಾಗಿ ಗಮನಿಸಿದರೆ, ಈ ಋತುವಿನಲ್ಲಿ ನಾಯಕನಾಗಿ ಅವರ ಕಠಿಣ ಕಾರ್ಯಗಳಲ್ಲಿ ಒಂದಾಗಿದೆ.

  ಹಿರಿಯ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರು ಈ ಬಾರಿ ಐಪಿಎಲ್‌ನಲ್ಲಿ ಆಡುವುದರಿಂದ ಹಿಂದೆ ಸರಿದಿದ್ದಾರೆ. ತಂಡಕ್ಕೆ ಕಡಿಮೆ ಅಭ್ಯಾಸದ ಸಮಯದ ಜೊತೆಗೆ, ಹೆಚ್ಚಿನ ಸಮಯದ ಸಂಪರ್ಕತಡೆಯಿಂದಾಗಿ ಸಿಎಸ್‌ಕೆ ತಯಾರಿಗೆ ಸವಾಲು ಎದುರಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ 30 ವಯಸ್ಸು ಮೀರಿದ ಆಟಗಾರರು ಹಲವು ಮಂದಿ ಇದ್ದಾರೆ. ಈ ಕಾರಣದಿಂದಾಗಿ ಜಾಣತನದಿಂದ ಧೋನಿ ತಂಡವನ್ನು ಮುನ್ನಡೆಸಬೇಕಾಗಿದೆ.

ಸಾಮರ್ಥ್ಯ:  ಅನುಭವಿ ಆಟಗಾರರು ತಂಡದಲ್ಲಿದ್ದಾರೆ. ಧೋನಿ, ವಾಟ್ಸನ್ ಮತ್ತು ರಾಯುಡು ಅವರಂತಹವರು ತಂಡ ಒತ್ತಡದಲ್ಲಿದ್ದಾಗ ಏನು ಮಾಡಬೇಕೆಂದು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ.

  ದೌರ್ಬಲ್ಯ: ಹರ್ಭಜನ್ ಹೊರಗುಳಿ ಯುವುದರೊಂದಿಗೆ ಸಿಎಸ್‌ಕೆ ಸ್ಪಿನ್‌ಗೆ ಸಹಾಯ ಮಾಡುವ ಪರಿಸ್ಥಿತಿಗಳಲ್ಲಿ ಆಫ್-ಸ್ಪಿನ್ನರ್‌ನ ಕೊರತೆ ಎದುರಿಸಲಿದೆ. ರೈನಾ ಅವರ ನಿರ್ಗಮನವು 3ನೇ ಕ್ರಮಾಂಕದಲ್ಲಿನ ಕೊರತೆ ತಂಡವನ್ನು ಕಾಡಲಿದೆ.

 ಅವಕಾಶ: ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಧೋನಿಗೆ ಈಗ ಕಳೆದುಕೊಳ್ಳಲು ಏನೂ ಇಲ್ಲ. ಅವರು ಸಂಪೂರ್ಣ ಸ್ವಾತಂತ್ರದೊಂದಿಗೆ ಬ್ಯಾಟಿಂಗ್ ಮಾಡಬಹುದು.

ಬೆದರಿಕೆ: ಕೋವಿಡ್ ಪ್ರಕರಣದಿಂದಾಗಿ ಸಿಎಸ್‌ಕೆಗೆ ಯುಎಇಯಲ್ಲಿ ಕಡಿಮೆ ತಯಾರಿ ಸಮಯ ಸಿಕ್ಕಿದೆ. ತಂಡ ಕೇವಲ ಹಿರಿಯ ಆಟಗಾರನನ್ನು ಅವಲಂಬಿಸಿರಲು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News