ಭಾರತೀಯ ರಾಜಕಾರಣಿಗಳು, ಸೇನಾ ನಾಯಕರ ಬೇಹುಗಾರಿಕೆ ನಡೆಸುತ್ತಿರುವ ಚೀನಾ ಕಂಪೆನಿಗೆ ಫೇಸ್‌ಬುಕ್ ನಿಷೇಧ

Update: 2020-09-17 18:03 GMT

ಹೊಸದಿಲ್ಲಿ, ಸೆ. 17: ‘ಹೈಬ್ರಿಡ್ ವಾರ್’ಗಾಗಿ ಮಾಹಿತಿ ಸಂಗ್ರಹಿಸುತ್ತಿರುವ ಚೀನಾ ಕಂಪೆನಿಯನ್ನು ನಿಷೇಧಿಸಲಾಗಿದೆ ಎಂದು ಫೇಸ್‌ಬುಕ್ ಗುರುವಾರ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಸೇರಿದಂತೆ 10 ಸಾವಿರಕ್ಕೂ ಅಧಿಕ ಭಾರತೀಯ ಗಣ್ಯ ವ್ಯಕ್ತಿಗಳ ಮಾಹಿತಿಯ ಮೇಲೆ ಈ ಕಂಪೆನಿ ಕಣ್ಣಿಟ್ಟಿದೆ ಎಂದು ವರದಿ ಪ್ರಕಟವಾದ ದಿನಗಳ ಬಳಿಕ ಫೇಸ್ ಬುಕ್ ಈ ನಿರ್ಧಾರ ತೆಗೆದುಕೊಂಡಿದೆ.

 ‘ದಿ ಪ್ರಿಂಟ್’ಗೆ ಮಾಡಲಾದ ಇಮೇಲ್ ಹೇಳಿಕೆಯಲ್ಲಿ ಫೇಸ್‌ಬುಕ್, ಶೆಂಝೆನ್ ಮೂಲದ ಝೆನ್‌ಹುವಾ ಡಾಟಾ ಇನ್‌ಫಾರ್ಮೇಶನ್ ಟೆಕ್ನಾಲಜಿ ಕಂಪೆನಿ ಫೇಸ್‌ಬುಕ್ ನೀತಿಗೆ ವಿರುದ್ಧವಾಗಿ ಮಾಹಿತಿಗಳನ್ನು ಅಳಿಸಿ ಹಾಕುತ್ತಿದೆ ಎಂದು ಹೇಳಿದೆ.

ಸಾರ್ವಜನಿಕ ಮಾಹಿತಿಯನ್ನು ಈ ರೀತಿ ಸಂಗ್ರಹಿಸುವಂತಿಲ್ಲ. ಆದುದರಿಂದ ಝೆನ್‌ಹುವಾ ಡಾಟಾ ಟೆಕ್ನಾಲಜಿ ಕಂಪೆನಿಗೆ ಫೇಸ್‌ಬುಕ್‌ನಲ್ಲಿ ನಿಷೇಧ ವಿಧಿಸಿದ್ದೇವೆ. ಅಲ್ಲದೆ ಈ ರೀತಿ ಮಾಹಿತಿ ಸಂಗ್ರಹಿಸದಂತೆ ಆದೇಶಿಸಿ ಪತ್ರ ಬರೆದಿದ್ದೇವೆ ಎಂದು ಫೇಸ್ ಬುಕ್ ಹೇಳಿದೆ. ಆದರೆ, ಈ ನಿಷೇಧ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ವ್ಯಾಟ್ಸ್‌ಆ್ಯಪ್‌ನಂತಹ ಅದರ ಎಲ್ಲ ಸೇವೆಗೂ ವಿಸ್ತರಿಸಲಾಗಿದೆಯೇ ?, ನಿಷೇಧ ವಿಧಿಸಲಾದ ದಿನಾಂಕ ಹಾಗೂ ಝೆನ್‌ಹುವಾಕ್ಕೆ ಬೇರೆ ಖಾತೆ ಇದೆಯೇ ?, (ಯಾಕೆಂದರೆ ಬೇರೆ ಹೆಸರಿನ ಖಾತೆ ಇದ್ದರೆ, ಫೇಸ್ ಬುಕ್ ಬಳಸುವುದನ್ನು ಅದು ಮುಂದುವರಿಸಬಹುದು) ಎಂಬ ಪ್ರಶ್ನೆಗಳಿಗೆ ಫೇಸ್‌ಬುಕ್ ಉತ್ತರ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News