ರೈಲು ಪ್ರಯಾಣಿಕರಿಗೆ ಟಿಕೆಟ್ ಜೊತೆಗೆ ಟೋಕನ್ ಬಳಕೆ ಶುಲ್ಕದ ಹೊರೆ: ಶೀಘ್ರದಲ್ಲೇ ಜಾರಿ

Update: 2020-09-18 08:45 GMT

ಹೊಸದಿಲ್ಲಿ: ಪ್ರಯಾಣಿಕರ ದಟ್ಟಣೆಯಿರುವ ದೇಶದ ರೈಲ್ವೆ ನಿಲ್ದಾಣಗಳ ಮೂಲಕ ರೈಲು ಪ್ರಯಾಣ ನಡೆಸುವ ಪ್ರಯಾಣಿಕರಿಂದ `ಟೋಕನ್ ಯೂಸರ್ ಫೀ' ಅಥವಾ ಟೋಕನ್ ಬಳಕೆ ಶುಲ್ಕವನ್ನು ಭಾರತೀಯ ರೈಲ್ವೆ ಸದ್ಯದಲ್ಲಿಯೇ ಸಂಗ್ರಹಿಸಲು ಆರಂಭಿಸಲಿದೆ.

ಈ ಶುಲ್ಕದಿಂದಾಗಿ ರೈಲು ದರಗಳಲ್ಲಿ ಸ್ವಲ್ಪ ಏರಿಕೆಯಾಗಲಿದೆ. ರೈಲ್ವೆ ನಿಲ್ದಾಣಗಳ ಆಧುನೀಕರಣ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಈ ಶುಲ್ಕ ಬಳಸಲಾಗುವುದು ಹಾಗೂ ಇದನ್ನು ಟಿಕೆಟ್ ದರದಲ್ಲಿಯೇ ಸೇರಿಸಲಾಗುವುದು.

ಈ ಟೋಕನ್ ಯೂಸರ್ ಫೀ ಒಂದು ಸಣ್ಣ ಮೊತ್ತವಾಗಲಿದೆ ಎಂದು ರೈಲ್ವೆ ಮಂಡಳಿ ಸಿಇಒ ಹಾಗೂ ಅಧ್ಯಕ್ಷ ವಿ ಕೆ ಯಾದವ್ ಹೇಳಿದ್ದಾರಲ್ಲದೆ ಇದು ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆಯನ್ನೂ ಸೃಷ್ಟಿಸುವುದಿಲ್ಲ ಎಂದಿದ್ದಾರೆ.

ದೇಶದಲ್ಲಿರುವ ಒಟ್ಟು 7000 ರೈಲ್ವೆ ನಿಲ್ದಾಣಗಳ ಪೈಕಿ ಮುಂದಿನ ಐದು ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿರುವ ಸಾಧ್ಯತೆಯಿರುವ ಶೇ 10ರಿಂದ 15ರಷ್ಟು ನಿಲ್ದಾಣಗಳಲ್ಲಿ ಮಾತ್ರ ಈ ಶುಲ್ಕ ಸಂಗ್ರಹಿಸಲಾಗುವುದು. ಒಂದು ಅಂದಾಜಿನ ಪ್ರಕಾರ ಸುಮಾರು 700ರಿಂದ 1000 ರೈಲ್ವೆ ನಿಲ್ದಾಣಗಳ ಮೂಲಕ ಪ್ರಯಾಣಿಸುವವರಿಗೆ ಈ ಶುಲ್ಕ ಅನ್ವಯವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News