ಪ್ರಧಾನಿಯ, ರಾಷ್ಟ್ರೀಯ ಭದ್ರತೆಯ ಮಾಹಿತಿಗಳಿದ್ದ ಕಂಪ್ಯೂಟರ್ ಗಳು ಹ್ಯಾಕ್

Update: 2020-09-18 08:52 GMT

ಹೊಸದಿಲ್ಲಿ: ನ್ಯಾಷನಲ್ ಇನ್ಫಾರ್ಮೇಟಿಕ್ಸ್ ಸೆಂಟರ್‍ ನಲ್ಲಿ ರಾಷ್ಟ್ರೀಯ ಭದ್ರತೆ, ಪ್ರಧಾನಿ ಸಹಿತ ಇತರ ವಿವಿಐಪಿಗಳ ಕುರಿತ ದಾಖಲೆಗಳಿರುವ ಕಂಪ್ಯೂಟರ್‍ಗಳನ್ನು ಸೆಪ್ಟೆಂಬರ್ ತಿಂಗಳ ಆರಂಭದ ವೇಳೆ ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ನಿರ್ದಿಷ್ಟ ಕಂಪ್ಯೂಟರ್‍ ಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಹಿತ ಹಿರಿಯ ಸರಕಾರಿ ಅಧಿಕಾರಿಗಳ ಕುರಿತಾದ ಮಾಹಿತಿಯಿತ್ತೆನ್ನಲಾಗಿದೆ.

ಈ ಹ್ಯಾಕಿಂಗ್ ಘಟನೆ ಬೆಳಕಿಗೆ ಬರುತ್ತಲೇ ದಿಲ್ಲಿ ಪೊಲೀಸರ ವಿಶೇಷ ಘಟಕ ಪ್ರಕರಣ ದಾಖಲಿಸಿದ್ದು, ಈ ಹ್ಯಾಕಿಂಗ್ ಬೆಂಗಳೂರಿನ ಸಂಸ್ಥೆಯೊಂದರ ಮುಖಾಂತರ ನಡೆದಿದೆಯೆಂದು ತಿಳಿದು ಬಂದಿದೆ.

ಎನ್‍ಐಸಿ ಉದ್ಯೋಗಿಗಳಿಗೆ ಇಮೇಲ್ ಒಂದು ಬಂದಿತ್ತೆನ್ನಲಾಗಿದ್ದು, ಅದರಲ್ಲಿ ಇದ್ದ ಲಿಂಕ್ ಒತ್ತುತ್ತಿದ್ದಂತೆಯೇ ಆ ನಿರ್ದಿಷ್ಟ ಕಂಪ್ಯೂಟರ್‍ ನಲ್ಲಿನ ಡಾಟಾ ಸೋರಿಕೆಯಾಗಿರುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿರುವ ಅಮೆರಿಕಾ ಮೂಲದ ಕಂಪೆನಿಯ ಕಾರ್ಯಾಲಯದಿಂದ ಈ ಇಮೇಲ್ ಬಂದಿರುವ ಸಾಧ್ಯತೆಯಿದ್ದು ತನಿಖೆ ಮುಂದುವರಿದಿದೆ.

ಚೀನಾದ ಝೆನ್ಹುವಾ ಡಾಟಾ ಇನ್ಫಾರ್ಮೇಶನ್ ಎಂಬ ಸಂಸ್ಥೆ ಭಾರತದ ಪ್ರಧಾನಿ, ರಾಷ್ಟ್ರಪತಿಯಿಂದ ಹಿಡಿದು ಸಾವಿರಾರು ಭಾರತೀಯರ ಕುರಿತು ಮಾಹಿತಿ ಕಲೆ ಹಾಕುತ್ತಿದೆ ಎಬ ಸುದ್ದಿಯ ಬೆನ್ನಲ್ಲೇ ಈ ಹ್ಯಾಕಿಂಗ್ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News