ದರ ನಿಗದಿಪಡಿಸಲು ಖಾಸಗಿ ರೈಲ್ವೆಗೆ ಕೇಂದ್ರದಿಂದ ಸ್ವಾತಂತ್ರ್ಯ

Update: 2020-09-18 18:12 GMT

ಹೊಸದಿಲ್ಲಿ, ಸೆ. 18: ದೇಶದಲ್ಲಿ ರೈಲು ಸೇವೆ ಆರಂಭವಾಗುವ ಸಂದರ್ಭ ತನ್ನ ಪ್ರಯಾಣಿಕರ ಪ್ರಯಾಣ ದರ ನಿಗದಿಪಡಿಸುವ ಅವಕಾಶವನ್ನು ಕೇಂದ್ರ ಸರಕಾರ ಖಾಸಗಿ ಕಂಪೆನಿಗಳಿಗೆ ನೀಡಲಿದೆ. ಈ ನಡೆಯ ಮುಖ್ಯ ಉದ್ದೇಶ ಹೂಡಿಕೆದಾರರನ್ನು ಆಕರ್ಷಿಸುವುದು ತಮ್ಮದೇ ಆದ ರೀತಿಯಲ್ಲಿ ಪಾಲನ್ನು ನಿಗದಿಪಡಿಸುವ ಸ್ವಾತಂತ್ರವನ್ನು ಖಾಸಗಿ ಕಂಪೆನಿಗಳಿಗೆ ನೀಡಲಾಗಿದೆ. ಆದರೆ, ಹವಾನಿಯಂತ್ರಿತ ಬಸ್‌ಗಳು ಹಾಗೂ ವಿಮಾನಗಳು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ. ಆದುದರಿಂದ ದರ ನಿಗದಿಪಡಿಸುವುದಕ್ಕಿಂತ ಮುನ್ನ ಇದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ.

ಯೋಜನೆ ಬಗ್ಗೆ ಅಲ್‌ಸ್ಟೋಮ್ ಎಸ್‌ಎ, ಅದಾನಿ ಎಂಟರ್‌ಪ್ರೈಸಸ್, ಜಿಎಂಆರ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ಬೊಂಬಾರ್ಡಿಯರ್ ಇಂಕ್ ಒಲವು ವ್ಯಕ್ತಪಡಿಸಿದೆ. ಈ ಯೋಜನೆಗಳು ಮುಂದಿನ 5 ವರ್ಷಗಳಲ್ಲಿ 750 ಕೋಟಿ ರೂಪಾಯಿ ತರುವ ಸಾಮರ್ಥ್ಯ ಹೊಂದಿದೆ ಎಂದು ರೈಲ್ವೆ ಸಚಿವಾಲಯ ಅಂದಾಜಿಸಿದೆ.

 ಜುಲೈಯಲ್ಲಿ 151 ರೈಲುಗಳ ಮೂಲಕ 109 ಮೂಲ ಗಮ್ಯಸ್ಥಾನದ ಮಾರ್ಗಗಳಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸುವ ಬಗ್ಗೆ ತಮ್ಮ ಆಶಕ್ತಿ ಬಗ್ಗೆ ತಿಳಿಸುವಂತೆ ಕೇಂದ್ರ ಸರಕಾರ ಖಾಸಗಿ ಕಂಪನೆಗಳಿಗೆ ಸೂಚಿಸಿದೆ.

ಪ್ರಸಕ್ತ ರೈಲ್ವೇ ಜಾಲ ಇಕ್ಕಟ್ಟು ಹಾಗೂ ಹಳೆಯದಾಗಿರುವುದರಿಂದ ರೈಲ್ವೇಯ ಆಧುನಿಕೀಕರಣ ತುಂಬಾ ಮುಖ್ಯವಾದುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News