54 ಲಕ್ಷದ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ

Update: 2020-09-20 15:22 GMT

ಹೊಸದಿಲ್ಲಿ, ಸೆ.20: ರವಿವಾರ ಬೆಳಗ್ಗಿನವರೆಗಿನ 24 ಗಂಟೆಯ ಅವಧಿಯಲ್ಲಿ ದೇಶದಲ್ಲಿ 92,605 ಹೊಸ ಪ್ರಕರಣ ದಾಖಲಾಗುವುದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 54,00,619ಕ್ಕೇರಿದ್ದರೆ, ಇದೇ ಅವಧಿಯಲ್ಲಿ ಕೊರೋನದಿಂದ 1,133 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 86,752ಕ್ಕೇರಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ದೇಶದಲ್ಲಿ ಈಗ 10,10,824 ಸಕ್ರಿಯ ಪ್ರಕರಣಗಳಿದ್ದರೆ, 43 ಲಕ್ಷಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಕೊರೋನದಿಂದ ಮರಣವನ್ನಪ್ಪುವ ದರ 1.61% ಆಗಿದ್ದು ಸೆಪ್ಟಂಬರ್ 19ರವರೆಗೆ 6,36,61,060 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ. ಗುಜರಾತ್‌ನಲ್ಲಿ ಒಂದೇ ದಿನ 1,432 ಹೊಸ ಸೋಂಕಿನ ಪ್ರಕರಣ ದಾಖಲಾಗಿದ್ದು ಸೋಂಕಿತರ ಒಟ್ಟು ಸಂಖ್ಯೆ 1.21 ಲಕ್ಷಕ್ಕೆ ಹೆಚ್ಚಿದೆ. ಈ ಮಧ್ಯೆ, ಕೊರೋನ ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ರಾಜಸ್ತಾನ ಸರಕಾರ ಸೆಕ್ಷನ್ 144 ಜಾರಿಗೊಳಿಸಿದ್ದು ಸಾಮಾಜಿಕ, ಧಾರ್ಮಿಕ ಆಚರಣೆಗಳ ಮೇಲಿನ ನಿಷೇಧವನ್ನು ಅಕ್ಟೋಬರ್ 31ರವರೆಗೆ ಮುಂದುವರಿಸಲಾಗಿದೆ. ಕೊರೋನ ಸೋಂಕು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 1ರವರೆಗೆ ನಡೆಯಬೇಕಿದ್ದ ಸಂಸತ್ತಿನ ಮುಂಗಾರು ಅಧಿವೇಶನವನ್ನು ಸೆಪ್ಟಂಬರ್ 23ಕ್ಕೆ ಮುಕ್ತಾಯಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News