ಪ್ಲಾಸ್ಮಾ ಬ್ಯಾಂಕ್‌ಗಳ ಬಗ್ಗೆ ದತ್ತ ಮಾಹಿತಿಯಿಲ್ಲ: ಸರಕಾರ

Update: 2020-09-20 15:49 GMT

ಹೊಸದಿಲ್ಲಿ, ಸೆ.20: ಕೊರೋನ ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯ ಚಿಕಿತ್ಸೆಯನ್ನು ಆರೋಗ್ಯ ಇಲಾಖೆ ಶಿಫಾರಸು ಮಾಡಿಲ್ಲ ಮತ್ತು ಪ್ಲಾಸ್ಮಾ ಬ್ಯಾಂಕ್‌ಗಳ ರಚನೆಯ ಕುರಿತ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸರಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.

ಕೊರೋನ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನೀಡಲು ಪ್ಲಾಸ್ಮಾ ಬ್ಯಾಂಕ್‌ಗಳ ರಚನೆಗೆ ಕೆಲವು ರಾಜ್ಯಗಳು ಉಪಕ್ರಮ ಆರಂಭಿಸಿವೆ. ಆದರೆ ದೇಶದಲ್ಲಿರುವ ಪ್ಲಾಸ್ಮಾ ಬ್ಯಾಂಕ್‌ಗಳ ಬಗ್ಗೆ ಸರಕಾರದ ಬಳಿ ದತ್ತಸಂಚಯ ಇಲ್ಲ ಎಂದು ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವಿನಿ ಚೌಬೆ ಈ ಕುರಿತ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ. ವೈದ್ಯಕೀಯ ನಿರ್ವಹಣೆ ಶಿಷ್ಟಾಚಾರದಲ್ಲಿ ವ್ಯಾಖ್ಯಾನಿಸಲಾದ ಉಪಗುಂಪಿನ ರೋಗಿಗಳ ಬಳಕೆಗಾಗಿ ಅಧ್ಯಯನ ಚಿಕಿತ್ಸೆಯಾಗಿ ಮಾತ್ರ ಪ್ಲಾಸ್ಮ ಥೆರಪಿಯನ್ನು ಸೇರಿಸಲಾಗಿದೆ.

 ಆಮ್ಲಜನಕ ಪೂರೈಕೆ, ಸ್ಟಿರಾಯ್ಡಿ ಇತ್ಯಾದಿ ಪ್ರಧಾನ ಚಿಕಿತ್ಸಾ ಕ್ರಮದ ಬಳಿಕವೂ ರೋಗಿಯಲ್ಲಿ ಚೇತರಿಕೆಯ ಲಕ್ಷಣ ಕಾಣದಿದ್ದಾಗ ಮತ್ತು ಸೋಂಕಿನ ಸೌಮ್ಯ ಲಕ್ಷಣವಿದ್ದಾಗ ಮಾತ್ರ ಈ ಚಿಕಿತ್ಸಾ ಕ್ರಮವನ್ನು ಪರಿಗಣಿಸಬಹುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News