ಪಾಕ್: ಸಿಖ್ ಯುವತಿ ನಿಗೂಢ ನಾಪತ್ತೆ

Update: 2020-09-20 16:43 GMT

 ಇಸ್ಲಾಮಾಬಾದ್,ಸೆ.20: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ 22 ವರ್ಷ ವಯಸ್ಸಿನ ಸಿಖ್ಖ್ ಮಹಿಳೆಯೊಬ್ಬರು ಕಾಣೆಯಾಗಿದ್ದು ಆಕೆಯ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಮತ್ತು ‘ಅಜ್ಞಾತ’ ಅಪಹರಣಕಾರನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆಂದು ಮಾಧ್ಯಮ ವರದಿಯೊಂದು ರವಿವಾರ ತಿಳಿಸಿದೆ.

ಸಿಖ್ಖರ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲೊಂದಾದ ಗುರುದ್ವಾರ ಪಂಜಾ ಸಾಹಿಬ್ ಇರುವ ಹಸ್ಸನ್‌ಬ್ದಾಲ್ ನಗರದ ಅಟ್ಟೊಕ್ ಜಿಲ್ಲೆಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆಯೆಂದು ಡಾನ್ ಸುದ್ದಿ ಪತ್ರಿಕೆ ವರದಿ ಮಾಡಿದೆ.

 ತ್ಯಾಜ್ಯವನ್ನು ಎಸೆಯಲು ಮನೆಯಿಂದ ಹೊರಬಂದಿದ್ದ ಯುವತಿಯು, ಮತ್ತೆ ವಾಪಾಸಾಗಿಲ್ಲವೆಂದು ಪತ್ರಿಕೆ ಹೇಳಿದೆ. ಆಕೆಯ ತಂದೆ ಹಸನ್‌ಬ್ದಾಲ್‌ನಲ್ಲಿ ಅಂಗಡಿಯೊಂದರ ಮಾಲಕನೆಂದು ವರದಿ ತಿಳಿಸಿದೆ.

   ಆದರೆ ಯುವತಿ ನಾಪತ್ತೆಯಾದ ಒಂದು ದಿನದ ಬಳಿಕ ಆಕೆ ತನ್ನ ತಂದೆ ವಾಟ್ಸ್ ಅಪ್ ಸಂದೇಶವೊಂದನ್ನು ಕಳುಹಿಸಿದ್ದು, ತಾನು ಸ್ವ ಇಚ್ಚೆಯಿಂದ ವಿವಾಹವಾಗಿದ್ದು, ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿದ್ದಾಳೆಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಹಸ್ಸನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News