ಡೀಸೆಲ್ ಬೆಲೆ ಸತತ 6ನೇ ದಿನವೂ ಇಳಿಕೆ

Update: 2020-09-22 16:15 GMT

ಹೊಸದಿಲ್ಲಿ, ಸೆ. 22: ಕಚ್ಚಾ ತೈಲದ ಬೆಲೆ ಸ್ಥಿರವಾಗಿದ್ದು, ಜಾಗತಿಕವಾಗಿ ತೈಲೋತ್ಪನ್ನದ ಬೆಲೆ ಕುಸಿತದಿಂದ ಸತತ 7ನೇ ದಿನವಾದ ಮಂಗಳವಾರ ಕೂಡ ಡೀಸೆಲ್ ಬೆಲೆ ಇಳಿಕೆಯಾಗಿದೆ. ತೈಲ ಕಂಪೆನಿಗಳು ಡೀಸೆಲ್‌ನೊಂದಿಗೆ ಕಳೆದ ಮೂರು ದಿನಗಳಿಂದ ಸತತವಾಗಿ ಪೆಟ್ರೋಲ್ ಮಾರಾಟ ಬೆಲೆಯನ್ನೂ ಇಳಿಕೆ ಮಾಡಿವೆ. ಇದು ಪೆಟ್ರೋಲ್ ಗ್ರಾಹಕರನ್ನು ಸ್ವಲ್ಪ ಮಟ್ಟಿಗೆ ನಿರಾಳರಾಗುವಂತೆ ಮಾಡಿದೆ. ದಿಲ್ಲಿಯಲ್ಲಿ ಸೋಮವಾರ ಡೀಸೆಲ್ ಬೆಲೆ 15 ಪೈಸೆ ಇಳಿಕೆಯಾಗಿದ್ದು, ಪ್ರತಿ ಲೀಟರ್‌ಗೆ ರೂ. 71.43 ಇದ್ದುದು 71.28ಕ್ಕೆ ಆಗಿತ್ತು. ಇದೇ ರೀತಿ ಪೆಟ್ರೋಲ್ ಬೆಲೆ 8 ಪೈಸೆ ಇಳಿಕೆಯಾಗಿದ್ದು, ಪ್ರತಿ ಲೀಟರ್‌ಗೆ ರೂ. 81.06 ಆಗಿತ್ತು. ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾದಂತಹ ಇತರ ಮೆಟ್ರೋಗಳಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 15ರಿಂದ 13 ಪೈಸೆಗೆ ಇಳಿಕೆಯಾದರೆ, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 8ರಿಂದ 7 ಪೈಸೆಗೆ ಇಳಿಕೆಯಾಗಿದೆ. ಮಂಗಳವಾರ ಬೆಲೆ ಕಡಿತದೊಂದಿಗೆ ಈ ತಿಂಗಳಲ್ಲಿ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2.28 ರೂಪಾಯಿ ಅಗ್ಗವಾಗಿದೆ. ಪೆಟ್ರೋಲ್ ಬೆಲೆ ಕೂಡ ಸೆಪ್ಟಂಬರ್‌ನಲ್ಲಿ ಪ್ರತಿ ಲೀಟರ್‌ಗೆ 1.04 ರೂಪಾಯಿ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News