ಎನ್‌ಡಿಎ ಅಂದರೆ ನೋ ಡಾಟಾ ಅವೈಲೆಬಲ್: ಶಶಿ ತರೂರ್

Update: 2020-09-22 16:21 GMT

ಹೊಸದಿಲ್ಲಿ, ಸೆ. 22: ವಲಸೆ ಕಾರ್ಮಿಕರ ಬಗ್ಗೆ ದತ್ತಾಂಶ ಇಲ್ಲ, ರೈತರ ಆತ್ಮಹತ್ಯೆ ಬಗ್ಗೆ ದತ್ತಾಂಶ ಇಲ್ಲ, ಆರ್ಥಿಕ ಉತ್ತೇಜನಗಳ ಕುರಿತ ತಪ್ಪು ದತ್ತಾಂಶ, ಕೊರೋನ ಸಾವಿನ ಬಗ್ಗೆ ಅಸ್ಪಷ್ಟ ದತ್ತಾಂಶ, ಜಿಡಿಪಿ ಬೆಳವಣಿಗೆ ಬಗ್ಗೆ ಮಬ್ಬಾದ ದತ್ತಾಂಶ-ಈ ಕೇಂದ್ರ ಸರಕಾರ ಎನ್‌ಡಿಎಗೆ ‘ನೋ ಡಾಟಾ ಅವೈಲೆಬಲ್’ (ದತ್ತಾಂಶ ಲಭ್ಯವಿಲ್ಲ) ಎಂಬ ಹೊಸ ಅರ್ಥ ನೀಡಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. 

ಕಾಂಗ್ರೆಸ್ ನಾಯಕ ಪಿ. ಚಿದಂಬರಂ ರವಿವಾರ ವಿವಾದಾತ್ಮಕ ಕೃಷಿ ವಿಧೇಯಕದ ವಿರುದ್ಧ ವಾಗ್ದಾಳಿ ನಡೆಸಲು ಕೇಂದ್ರ ಸರಕಾರದ ದತ್ತಾಂಶದ ಕೊರತೆಯನ್ನು ಬಳಸಿಕೊಂಡರು. ‘‘ದತ್ತಾಂಶ ಇಲ್ಲದೇ ಇದ್ದರೆ, ಯಾವ ರೈತ ತನ್ನ ಉತ್ಪಾದನೆಯನ್ನು ಯಾವ ವ್ಯಾಪಾರಿಗೆ ಮಾರಾಟ ಮಾಡುತ್ತಾನೆ ಎಂದು ಸಚಿವ (ಕೃಷಿ)ರಿಗೆ ಗೊತ್ತಾಗುವುದು ಹೇಗೆ ? ದೇಶಾದ್ಯಂತ ಪ್ರತಿ ದಿನ ನಡೆಯುತ್ತಿರುವ ಲಕ್ಷಾಂತರ ರೂಪಾಯಿ ವ್ಯವಹಾರಗಳನ್ನು ತಿಳಿಯುವುದು ಹೇಗೆ ? ಪ್ರತಿ ವರ್ಗಾವಣೆಯಲ್ಲಿ ಅವರು ಕನಿಷ್ಠ ಬೆಂಬಲ ಬೆಲೆಯ ಖಾತರಿ ನೀಡುವುದು ಹೇಗೆ?’’ ಎಂದು ಪ್ರಶ್ನಿಸಿದ್ದರು. ‘‘ಲಾಕ್‌ಡೌನ್ ಸಂದರ್ಭ ಎಷ್ಟು ಮಂದಿ ವಲಸೆ ಕಾರ್ಮಿಕರು ಮೃತಪಟ್ಟರು...ಎಷ್ಟು ಮಂದಿ ಉದ್ಯೋಗ ಕಳೆದುಕೊಂಡರು ಎಂಬುದು ಮೋದಿ ಸರಕಾರಕ್ಕೆ ತಿಳಿದಿಲ್ಲ. ಅವರು ಲೆಕ್ಕ ಮಾಡಿಲ್ಲ ಎಂದರೆ, ಯಾರೊಬ್ಬರು ಸಾಯಲಿಲ್ಲ ಎಂದರ್ಥವೇ? ’’ ಎಂದು ಕಾಂಗ್ರೆಸ್ ನಾಯಕ ರಾಹಲ್ ಗಾಂಧಿ ಇತ್ತೀಚೆಗೆ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News