ಕೃಷಿ ಮಸೂದೆಗೆ ಒಪ್ಪಿಗೆ ನೀಡದೆ ವಾಪಸ್ ಕಳಿಸಿ: ರಾಷ್ಟ್ರಪತಿಗೆ ವಿಪಕ್ಷಗಳ ಆಗ್ರಹ

Update: 2020-09-23 13:37 GMT

ಹೊಸದಿಲ್ಲಿ, ಸೆ.23: ಸಂಸತ್ತಿನಲ್ಲಿ ಅಂಗೀಕಾರವಾಗಿರುವ ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆಯನ್ನು ಮುಂದುವರಿಸಿದ್ದು, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಬುಧವಾರ ಸಂಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದರು.

ವಿಪಕ್ಷಗಳು ಸಂಸತ್ ಕಲಾಪ ಬಹಿಷ್ಕರಿಸಿದ ಮರುದಿನ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಆಝಾದ್ ಹಾಗೂ ರಾಷ್ಟ್ರಪತಿಗಳ  ಭೇಟಿ ನಡೆದಿದೆ.

"ಕೃಷಿ ಮಸೂದೆಗಳನ್ನು ತರುವ ಮೊದಲು ಸರಕಾರವು ಎಲ್ಲ ಪಕ್ಷಗಳನ್ನು ಹಾಗೂ ರೈತ ಮುಖಂಡರನ್ನು ಸಂಪರ್ಕಿಸಬೇಕಾಗಿತ್ತು. ಮತಗಳ ವಿಭಜನೆ ಹಾಗೂ ಧ್ವನಿ ಮತದಾನ ಇರಲಿಲ್ಲ. ಪ್ರಜಾಪ್ರಭುತ್ವದ ದೇವಾಲಯದಲ್ಲಿ ಸಂವಿಧಾನವನ್ನು ದುರ್ಬಲಗೊಳಿಸಲಾಯಿತು. ಕೃಷಿ ಮಸೂದೆಗಳನ್ನು ಅಸಾಂವಿಧಾನಿಕವಾಗಿ ಅಂಗೀಕರಿಸಲಾಗಿದೆ. ರಾಷ್ಟ್ರಪತಿಗಳು ಈ ಮಸೂದೆಗೆ ಒಪ್ಪಿಗೆ ನೀಡದೆ ವಾಪಸ್ ಕಳುಹಿಸಬೇಕು ಎಂದು ನಾವು ಅವರಿಗೆ ಒತ್ತಾಯಿಸಿದ್ದೇವೆ'' ಎಂದು ರಾಷ್ಟ್ರಪತಿಯ ಭೇಟಿಯ ಬಳಿಕ ಆಝಾದ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News