ಭಾರತಕ್ಕೆ ತೆರಳುವ ವಿಮಾನಗಳಿಗೆ ಸೌದಿ ಅರೇಬಿಯಾ ಅನುಮತಿ

Update: 2020-09-24 13:38 GMT

ಹೊಸದಿಲ್ಲಿ, ಸೆ.24: ವಂದೇ  ಮಾತರಂ ಮಿಷನ್ ಅಡಿ ಭಾರತಕ್ಕೆ ತೆರಳುವ ವಿಮಾನಗಳ ಹಾರಾಟಕ್ಕೆ ಸೌದಿ ಅರೇಬಿಯಾ ಅನುಮತಿ ನೀಡಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ತಿಳಿಸಿದೆ.

ಆದರೆ, ಭಾರತದಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣಿಕ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

ಕೊರೋನ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಭಾರತ ಹಾಗೂ ವಿವಿಧ ದೇಶಗಳಿಂದ ಬರುವ ಹಾಗೂ ಹೋಗುವ ವಿಮಾನಗಳ ಹಾರಾಟವನ್ನು ಮಂಗಳವಾರ ಸೌದಿ ಅರೇಬಿಯಾ ನಿರ್ಬಂಧಿಸಿತ್ತು. ಈ ಸಂಬಂಧ ಸೌದಿಯ ನಾಗರಿಕ ವಿಮಾನ ಯಾನ ಪ್ರಾಧಿಕಾರವು ಆದೇಶವೊಂದನ್ನು ಮಂಗಳವಾರ ಹೊರಡಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News