ಆರು ವರ್ಷಗಳ ಬಳಿಕ ಖಜಾಂಚಿಯನ್ನು ಆಯ್ಕೆ ಮಾಡಿದ ಬಿಜೆಪಿ

Update: 2020-09-26 17:57 GMT

ಹೊಸದಿಲ್ಲಿ, ಸೆ.26: ಬಿಜೆಪಿ ಸಾಂಸ್ಠಿಕ ಪುನರ್ ರಚನೆ ಶನಿವಾರ ನಡೆದಿದ್ದು,ಪಕ್ಷದಲ್ಲಿ ಕೊನೆಗೂ ಖಜಾಂಚಿಯನ್ನು ಆಯ್ಕೆ ಮಾಡಲಾಗಿದೆ. ಪಿಯೂಷ್ ಗೋಯಲ್ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾದ ಬಳಿಕ 2014ರಿಂದ ಈ ಹುದ್ದೆ ಖಾಲಿಯಾಗಿತ್ತು.

ಇದೀಗ ಹುದ್ದೆಗೆ ಉತ್ತರ ಪ್ರದೇಶದ ಮಾಜಿ ಹಣಕಾಸು ಸಚಿವ ರಾಜೇಶ್ ಅಗರ್ವಾಲ್ ರನ್ನು ನೇಮಿಸಲಾಗಿದೆ. ಅಗರ್ವಾಲ್ ಈ ಹಿಂದೆ ಬಿಜೆಪಿ ರಾಜ್ಯ ಘಟಕದ ಖಜಾಂಚಿಯಾಗಿದ್ದರು. ಮಧ್ಯಪ್ರದೇಶದ ಸಂಸತ್ ಸದಸ್ಯ ಸುಧೀರ್ ಗುಪ್ತಾರನ್ನು ಜಂಟಿ ಖಜಾಂಚಿಯಾಗಿ ಆಯ್ಕೆಮಾಡಲಾಗಿದೆ.

ಅಗರ್ವಾಲ್ ಹಾಗೂ ಗುಪ್ತಾ ಇಬ್ಬರೂ ಆರ್ ಎಸ್ಎಸ್ ಹಿನ್ನೆಲೆಯವರು. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದ  ಬಿಜೆಪಿ ಯ ಹೊಸ ತಂಡದಲ್ಲಿ ಉತ್ತರ ಪ್ರದೇಶದಿಂದ ಆಯ್ಕೆಯಾಗಿರುವ 10 ನಾಯಕರ ಪೈಕಿ ಅಗರ್ವಾಲ್ ಕೂಡ ಒಬ್ಬರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News