ಈ ದೇಶದಲ್ಲಿ ನಡೆಯಿತು ಲಾಕ್‌ಡೌನ್ ವಿರುದ್ಧ ಭಾರೀ ಪ್ರತಿಭಟನೆ

Update: 2020-09-27 16:09 GMT
ಸಾಂದರ್ಭಿಕ ಚಿತ್ರ

ಲಂಡನ್, ಸೆ. 27: ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯುವುದಕ್ಕಾಗಿ ಬ್ರಿಟನ್‌ನಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಿರುವುದನ್ನು ವಿರೋಧಿಸಿ ಶನಿವಾರ ಲಂಡನ್‌ನಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು.

ನಗರ ಮಧ್ಯದ ಟ್ರಾಫಲ್ಗರ್ ಚೌಕದಲ್ಲಿ ನೆರೆದ 10,000ಕ್ಕೂ ಅಧಿಕ ಮಂದಿಯನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದಾಗ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿತು.

10 ಮಂದಿ ಪ್ರತಿಭಟನಕಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬಳಿಕ ಘೋಷಿಸಿದ್ದಾರೆ. ನಾಲ್ವರು ಪೊಲೀಸರಿಗೆ ಗಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಈವರೆಗೆ ಕೊರೋನ ವೈರಸ್‌ನಿಂದಾಗಿ ಸುಮಾರು 42,000 ಸಾವುಗಳು ಸಂಭವಿಸಿವೆ. ಇದು ಯುರೋಪ್‌ನಲ್ಲೇ ಅತ್ಯಧಿಕವಾಗಿದೆ.

ಈ ವಾರ ಪ್ರಧಾನಿ ಬೊರಿಸ್ ಜಾನ್ಸನ್ ಸರಕಾರವು ಆರಕ್ಕಿಂತ ಹೆಚ್ಚು ಜನರು ಒಟ್ಟು ಸೇರದಂತೆ ಹಾಗೂ ಪಬ್ ಮತ್ತು ರೆಸ್ಟೋರೆಂಟ್‌ಗಳು ರಾತ್ರಿ 10 ಗಂಟೆಗೆ ಬಾಗಿಲು ಹಾಕುವಂತೆ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News