ಲಡಾಖ್: ಹೆಚ್ಚುವರಿ ಟ್ಯಾಂಕ್, ಸಶಸ್ತ್ರ ಯೋಧರನ್ನು ನಿಯೋಜಿಸಿದ ಭಾರತೀಯ ಸೇನೆ

Update: 2020-09-27 18:09 GMT

ಲೇಹ್, ಸೆ.27: ಲಡಾಖ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತ-ಚೀನಾ ಸೇನೆಯ ಮಧ್ಯೆ ಬಿಕ್ಕಟ್ಟು ಮುಂದುವರಿದಿರುವಂತೆಯೇ, ಪೂರ್ವ ಲಡಾಖ್‌ನ ಮುಂಚೂಣಿ ನೆಲೆಗೆ ಭಾರತ ಹೆಚ್ಚುವರಿ ಟ್ಯಾಂಕ್ ಹಾಗೂ ಸಶಸ್ತ್ರ ಯೋಧರನ್ನು ರವಾನಿಸಿರುವುದನ್ನು ವೀಡಿಯೊ ದೃಶ್ಯಗಳು ದೃಢಪಡಿಸಿವೆ.

ಪೂರ್ವ ಲಡಾಖ್‌ನ ಚುಮರ್-ಡೆಮ್ಚೋಕ್ ಪ್ರದೇಶದಲ್ಲಿ ಅತ್ಯಾಧುನಿಕ ಟಿ-90 ಟ್ಯಾಂಕ್‌ಗಳು ಹಾಗೂ ಬಿಎಂಪಿ ವಾಹನಗಳನ್ನು ಹಾಗೂ ಸಶಸ್ತ್ರ ಯೋಧರನ್ನು ನಿಯೋಜಿಸಲಾಗಿದ್ದು , ಈ ಮೂಲಕ ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ಟ್ಯಾಂಕ್ ನಿಯೋಜಿಸಿದ ದಾಖಲೆ ಭಾರತೀಯ ಸೇನೆಯದ್ದಾಗಿದೆ ಎಂದು ಮೂಲಗಳು ಹೇಳಿವೆ. ಬಿಎಂಪಿ ವಾಹನಗಳು ಮೈನಸ್ 40 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ.

ಇಂತಹ ದುರ್ಗಮ ಪ್ರದೇಶದಲ್ಲಿ ಟ್ಯಾಂಕ್, ಯೋಧರ ಯುದ್ಧ ವಾಹನ, ಫಿರಂಗಿಗಳನ್ನು ನಿರ್ವಹಿಸುವುದು ಸವಾಲಿನ ಕಾರ್ಯವಾಗಿದೆ ಎಂದು ಸೇನಾಪಡೆಯ 14 ಕಾರ್ಪ್ಸ್ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಅರವಿಂದ್ ಕಪೂರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News