ಎನ್‌ಡಿಎ ಮಿತ್ರಪಕ್ಷಗಳು ಬಿಜೆಪಿಗೆ 'ಸ್ಟೆಪ್ನಿ' ಟೈರ್‌ಗಳಿದ್ದಂತೆ : ಪಂಜಾಬ್ ಮಾಜಿ ಡಿಸಿಎಂ ಸುಖಬೀರ್ ಸಿಂಗ್

Update: 2020-09-29 04:31 GMT

ಚಂಡೀಗಢ : ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ (ಎನ್‌ಡಿಎ)ನಲ್ಲಿರುವ ಬಿಜೆಪಿ ಮಿತ್ರಪಕ್ಷಗಳು ಸ್ಟೆಪ್ನಿ ಟೈರ್‌ಗಳಿದ್ದಂತೆ. ಬೇಕಾದಾಗ ಮಾತ್ರ ಈ ಪಕ್ಷಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಶಿರೋಮಣಿ ಅಕಾಲಿದಳ ಅಧ್ಯಕ್ಷ ಮತ್ತು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಬಿಜೆಪಿ ಎಂದೂ ಮಿತ್ರ ಪಕ್ಷಗಳ ಜತೆ ಚರ್ಚಿಸಿಲ್ಲ ಎಂದು ದಿ ಪ್ರಿಂಟ್‌ಗೆ ನೀಡಿದ ಮುಕ್ತ ಸಂದರ್ಶನದಲ್ಲಿ ದೂರಿದ್ದಾರೆ.

"ತಮ್ಮ ಅಜೆಂಡಾದಲ್ಲಿ ಏನಿದೆಯೋ ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದು, ಮಿತ್ರಪಕ್ಷಗಳು ಕೂಡಾ ಅದೇ ದಾರಿ ಅನುಸರಿಸಬೇಕು ಎಂದು ಬಯಸಿದೆ" ಎಂದು ಹೇಳಿದ್ದಾರೆ.

"ಇದೀಗ ಆಂಗೀಕರಿಸಿರುವ ಕೃಷಿ ಮಸೂದೆಗಳಂತೆ, ಅವರು ರೈತರ ಪರವಾಗಿಲ್ಲ. ನಾವು ವಿವಿಧ ಹಂತಗಳಲ್ಲಿ ಬದಲಾವಣೆಗೆ ಒತ್ತಡ ತಂದು ಆಕ್ಷೇಪ ಎತ್ತಿದ್ದೇವು. ಆದರೆ ಇದನ್ನು ಬಿಜೆಪಿ ಮುಖಂಡರು ಕೇಳಿಸಿಕೊಳ್ಳಲಿಲ್ಲ. ಆದ್ದರಿಂದ ಎನ್‌ಡಿಎ ತೊರೆಯಲು ಇದು ಸೂಕ್ತ ಕಾಲ ಎಂದು ನಿರ್ಧರಿಸಿದೆವು" ಎಂದು ಪಕ್ಷದ ನಿರ್ಧಾರದ ಹಿನ್ನೆಲೆ ವಿವರಿಸಿದರು.

"ಮೋದಿ ಬಗ್ಗೆ ನಮ್ಮ ತಂದೆಗೆ ಅಪಾರ ಗೌರವ ಇತ್ತು... ನನಗೂ ಅಪಾರ ಗೌರವ ಇದೆ. ಆದರೆ ಪಂಜಾಬ್‌ನಲ್ಲಿ ಹೊಲಗಳನ್ನೇ ನಂಬಿರುವ 20 ಲಕ್ಷ ರೈತರ ಭವಿಷ್ಯವನ್ನು ಬಲಿಕೊಡುವ ರಾಜಕೀಯ ಬದ್ಧತೆಗೆ ನಾವು ಅವಕಾಶ ನೀಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

"ನಾವು ಎನ್‌ಡಿಎ ಕೊಂಡಿ ಕಳಚಿಕೊಳ್ಳುವ ಮೂಲಕ ಜಾತ್ಯತೀತತೆಯ ಲವಲೇಶವೂ ಇದೀಗ ಎನ್‌ಡಿಎಯಲ್ಲಿ ಉಳಿದಿಲ್ಲ. ಬಿಜೆಪಿಗೆ ಈಗ ಅಲ್ಪಸಂಖ್ಯಾತರ ಬೆಂಬಲ ಇಲ್ಲ" ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News