ಈಗಲೇ ತಿಳಿದುಕೊಳ್ಳಿ : ಅಕ್ಟೋಬರ್ ನಲ್ಲಿವೆ ಹಲವು ದಿನಗಳ ಬ್ಯಾಂಕ್ ರಜೆ

Update: 2020-10-02 13:37 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ. 29 : ಕೊರೊನದಿಂದ ಸಾಕಷ್ಟು ರಜೆಯಾಗಿದ್ದರೂ ಮತ್ತೆ ರಜೆ ಸೀಸನ್ ಬಂದಿದೆ. ಹಾಗಾಗಿ ಬ್ಯಾಂಕಿಂಗ್ ಕೆಲಸಗಳಿಗೆ ಹೋಗುವವರು ಈ ರಜೆಗಳು ಯಾವತ್ತೂ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಈ ಸೋಂಕಿನ ಕಾಲದಲ್ಲಿ ಕಷ್ಟಪಟ್ಟು ಬ್ಯಾಂಕ್ ಗೆ ಹೋಗಿ ಅಲ್ಲಿ ರಜೆ ಎಂದು ಗೊತ್ತಾದರೆ ಯಾರಿಗೆ ಬೇಕು ಆ ಪೇಚಾಟ ?

ಅಕ್ಟೊಬರ್ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ಪ್ರಕಾರ ಕರ್ನಾಟಕದಲ್ಲಿ 10 ದಿನಗಳ ರಜೆ ಇದೆ.

ರಿಸರ್ವ್ ಬ್ಯಾಂಕ್ ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ ಅಕ್ಟೊಬರ್ 2 ರಂದು ಗಾಂಧಿ ಜಯಂತಿ ಪ್ರಯುಕ್ತ, ಅಕ್ಟೊಬರ್ 4 ಕ್ಕೆ ರವಿವಾರ, ಅಕ್ಟೋಬರ್ 10ಕ್ಕೆ ಎರಡನೇ ಶನಿವಾರ, ಅಕ್ಟೋಬರ್ 11 ರಂದು ರವಿವಾರ, ಅಕ್ಟೋಬರ್ 18ಕ್ಕೆ ರವಿವಾರ, 24 ಅಕ್ಟೋಬರ್ ನಾಲ್ಕನೇ ಶನಿವಾರ, 25 ಅಕ್ಟೋಬರ್ ರವಿವಾರ  ರಜೆ ಇರುತ್ತವೆ.

ಅಕ್ಟೊಬರ್ 26ಕ್ಕೆ ವಿಜಯದಶಮಿ ಪ್ರಯುಕ್ತ,  ಅಕ್ಟೊಬರ್ 30ಕ್ಕೆ ಮಿಲಾದುನ್ನಬಿ, ಅಕ್ಟೊಬರ್ 31ಕ್ಕೆ ವಾಲ್ಮೀಕಿ ಜಯಂತಿ ಹಾಗು ಸರ್ದಾರ್ ವಲ್ಲಭ ಭಾಯ್ ಪಟೇಲ್ ಜಯಂತಿ ಪ್ರಯುಕ್ತ ರಜೆ ಇರಲಿವೆ. ಇವಿಷ್ಟು ಕರ್ನಾಟಕದಲ್ಲಿ ಬ್ಯಾಂಕ್ ಗಳು ರಜೆ ಇರುವ ದಿನಗಳು. ಇವಲ್ಲದೆ  ಅಕ್ಟೊಬರ್ ನ ಇತರ  ಕೆಲವು ದಿನಗಳು ದೇಶದ ವಿವಿಧೆಡೆ ಬೇರೆ ಬೇರೆ ಕಾರಣಗಳಿಗೆ ರಜೆ ಇರಲಿವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News