ಲಾಕ್ ಡೌನ್ ಅವಧಿಯಲ್ಲಿ ಮುಕೇಶ್ ಅಂಬಾನಿಯ ಗಳಿಕೆ ಗಂಟೆಗೆ 90 ಕೋ.ರೂ

Update: 2020-09-29 16:21 GMT

ಹೊಸದಿಲ್ಲಿ,ಸೆ.29: ಕಳೆದ ಮಾರ್ಚ್ ‌ನಲ್ಲಿ ಕೊರೋನ ವೈರಸ್ ಲಾಕ್‌ಡೌನ್ ಹೇರಿದಾಗಿನಿಂದ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಪ್ರತಿ ಗಂಟೆಗೆ 90 ಕೋ.ರೂ.ಗಳ ಆದಾಯವನ್ನು ಗಳಿಸುವ ಮೂಲಕ 2020ನೇ ಸಾಲಿನ ಐಐಎಫ್‌ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಪಟ್ಟಿಯಲ್ಲಿ ಸತತ ಒಂಬತ್ತನೇ ವರ್ಷವೂ ಭಾರತದ ಅತ್ಯಂತ ಶ್ರೀಮಂತ ಎಂಬ ತನ್ನ ಪಟ್ಟವನ್ನು ಉಳಿಸಿಕೊಂಡಿದ್ದಾರೆ.

ವಿಶ್ವದ ಐವರು ಅತ್ಯಂತ ಶ್ರೀಮಂತರಲ್ಲಿ ಏಕೈಕ ಭಾರತೀಯನಾಗಿರುವ ಅಂಬಾನಿ ಸರಣಿ ನಿಧಿ ಎತ್ತುವಳಿ ಮತ್ತು ಜಿಯೊ ಹಾಗೂ ರಿಲಯನ್ಸ್ ರಿಟೇಲ್‌ಗಳಲ್ಲಿ ಫೇಸ್‌ಬುಕ್, ಗೂಗಲ್, ಸಿಲ್ವರ್ ಲೇಕ್ ಇತ್ಯಾದಿ ಕಂಪನಿಗಳ ವ್ಯೂಹಾತ್ಮಕ ಹೂಡಿಕೆಗಳ ಮೂಲಕ 2,77,700 ಕೋ.ರೂ.ಗಳನ್ನು ಕಲೆಹಾಕಿದ್ದಾರೆ. ಇದರೊಂದಿಗೆ ಅವರ ವೈಯಕ್ತಿಕ ಸಂಪತ್ತು 6,58,400 ಕೋ.ರೂ.ಗೇರಿದೆ.

ಅಂಬಾನಿಯವರ ಒಟ್ಟು ಸಂಪತ್ತು ಪಟ್ಟಿಯಲ್ಲಿ ಅವರ ನಂತರದ ಐವರು ಶ್ರೀಮಂತರ ಒಟ್ಟು ಸಂಪತ್ತಿಗಿಂತ ಅಧಿಕವಾಗಿದೆ. ಇದರೊಂದಿಗೆ ಅವರು ಏಷ್ಯಾದ ಅತ್ಯಂತ ಶ್ರೀಮಂತ ಮತ್ತು ವಿಶ್ವದಲ್ಲಿ ನಾಲ್ಕನೆಯ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ್ರಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News