ಬಾಬರಿ ಮಸೀದಿ ದ್ವಂಸ ಪ್ರಕರಣದ ತೀರ್ಪಿಗೆ ಉವೈಸಿ ಪ್ರತಿಕ್ರಿಯೆ

Update: 2020-09-30 13:14 GMT

ಹೈದರಾಬಾದ್, ಸೆ.30:  ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸಹಿತ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಇದು ಅಪ್ರಿಯ ತೀರ್ಪು ಎಂದು ಕರೆದಿದ್ದು, ಸಿಬಿಐ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ವರದಿಗಾರರೊಂದಿಗೆ ಮಾತನಾಡಿದ ಉವೈಸಿ, ಡಿಸೆಂಬರ್ 6 ರಂದು ಮಸೀದಿಯನ್ನು ನೆಲಸಮಗೊಳಿಸಿದ್ದು ಒಂದು ರೀತಿಯ ಮ್ಯಾಜಿಕ್ ಆಗಿದೆಯೇ? ಅಲ್ಲಿಗೆ ಜನರನ್ನು ಒಂದುಗೂಡಿಲು ಯಾರು ಕರೆ ನೀಡಿದರು? ಅವರು ಅಲ್ಲಿಗೆ ಪ್ರವೇಶಿಸುವುದನ್ನು ಯಾರು ಖಚಿತಪಡಿಸಿಕೊಂಡರು? ಎಂದು ಪ್ರಶ್ನಿಸಿದರು.

ಸಿಬಿಐ ತನ್ನ ಸ್ವಾತಂತ್ರ್ಯವನ್ನು ರಕ್ಷಿಸಲು ತೀರ್ಪಿನ ವಿರುದ್ಧ ಮೇಲ್ಮನವಿಯನ್ನುಸಲ್ಲಿಸಬೇಕು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ನಾನು ಒತ್ತಾಯಿಸುವೆ ಎಂದು ಉವೈಸಿ ಹೇಳಿದರು.

1992ರ ಡಿ.6ರಂದು ಬಾಬರಿ ಮಸೀದಿಯನ್ನು ನೆಲಸಮಗೊಳಿಸಲಾಗಿದ್ದು, ಇದು ಹಲವಾರು ತಿಂಗಳುಗಳ ಕಾಲ ಕೋಮುಗಲಭೆಗೆ ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News