ಮಥುರಾದಲ್ಲಿರುವ ಮಸೀದಿ ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಉ.ಪ್ರ.ನ್ಯಾಯಾಲಯ

Update: 2020-09-30 13:51 GMT

ಹೊಸದಿಲ್ಲಿ, ಸೆ.30: ಉತ್ತರಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮ ಭೂಮಿಯ ಸಮೀಪವಿರುವ ಮಸೀದಿಯನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಉತ್ತರಪ್ರದೇಶದ ನ್ಯಾಯಾಲಯ ವಜಾಗೊಳಿಸಿದೆ. ಅಯೋಧ್ಯೆ ರಾಮಮಂದಿರ ಪ್ರಕರಣ ಕುರಿತ ತೀರ್ಪಿನ ಬೆನ್ನಿಗೇ ಈ ತೀರ್ಪು ಬಂದಿದೆ.

ಮೊಘಲ್ ಚಕ್ರವರ್ತಿ ಔರಂಗಜೇಬನು  ಶ್ರೀ ಕೃಷ್ಣನ ಜನ್ಮ ಸ್ಥಳವೆಂದು ನಂಬಲಾದ ಸ್ಥಳದಲ್ಲಿ ದೇವಾಲಯದ ಒಂದು ಭಾಗವನ್ನು ನಾಶಪಡಿಸಿದ್ದ. ದೇವಾಲಯದ ಪಕ್ಕದಲ್ಲಿರುವ ಮಸೀದಿಯನ್ನು ತೆಗೆದುಹಾಕಬೇಕೆಂದು  ಎಂದು ಆಗ್ರಹಿಸಿ ಕಳೆದ ವಾರ ಮಥುರಾದ ಸಿವಿಲ್ ನ್ಯಾಯಾಲಯದಲ್ಲಿ  ಅರ್ಜಿ ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News