ಅಧ್ಯಕ್ಷೀಯ ಅಭ್ಯರ್ಥಿಗಳ ಮುಖಾಮುಖಿಯಲ್ಲಿ ‘ಇನ್‌ಶಾ ಅಲ್ಲಾಹ್’ ಎಂದ ಬೈಡನ್

Update: 2020-09-30 17:43 GMT

ಕ್ಲೀವ್‌ಲ್ಯಾಂಡ್ (ಅಮೆರಿಕ), ಸೆ. 30: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧಿಗಳ ನಡುವೆ ಮಂಗಳವಾರ ನಡೆದ ಟೆಲಿವಿಶನ್ ನೇರಪ್ರಸಾರದ ಮುಖಾಮುಖಿಯ ವೇಳೆ, ಪ್ರತಿಪಕ್ಷ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ‘ಇನ್‌ಶಾ  ಅಲ್ಲಾಹ್’ ಎಂಬುದಾಗಿ ಉದ್ಗರಿಸಿದ್ದಾರೆ.

 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ತೆರಿಗೆ ವಿವರಗಳನ್ನು ಎಂದಾದರೂ ಬಹಿರಂಗಪಡಿಸಬಹುದೇ ಎಂಬ ಸಂಶಯವನ್ನು ಬೈಡನ್ ವ್ಯಕ್ತಪಡಿಸಿದರು.

ಈ ಬಗ್ಗೆ ನಿರ್ದಿಷ್ಟ ಸಮಯ ಮಿತಿಯನ್ನು ನೀಡುವಂತೆ ಕಾರ್ಯಕ್ರಮದ ನಿರೂಪಕ ಕ್ರಿಸ್ ವಾಲೇಸ್ ಟ್ರಂಪ್‌ರನ್ನು ಪದೇ ಪದೇ ಒತ್ತಾಯಿಸಿದರು. ಆಗ, ‘‘ನೀವು ಅದನ್ನು (ತೆರಿಗೆ ವಿವರಗಳನ್ನು) ನೋಡಲಿಕ್ಕಿದ್ದೀರಿ’’ ಎಂದು ಟ್ರಂಪ್ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬೈಡನ್, ‘‘ಯಾವಾಗ? ಇನ್‌ಶಾಅಲ್ಲಾ?’’ ಎಂದು ಉದ್ಗರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News