ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಹುಲ್ ಗಾಂಧಿಯಿಂದ ಅ.4ರಿಂದ ಟ್ರಾಕ್ಟರ್ ರ‍್ಯಾಲಿ

Update: 2020-10-02 15:24 GMT

 ಚಂಡಿಗಡ,ಅ.2: ತನ್ನ ಕಾರ್ಯಕ್ರಮಗಳಲ್ಲಿ ಸಣ್ಣ ಬದಲಾವಣೆಯನ್ನು ಮಾಡಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪೂರ್ವ ನಿಗದಿತ ಅ.3ರಿಂದ 5ರ ಬದಲು ಈಗ ಅ.4ರಿಂದ 6ರವರೆಗೆ ವಿವಾದಾಸ್ಪದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಟ್ರಾಕ್ಟರ್ ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ಥುಕ್ರಾಲ್ ಅವರು ಶುಕ್ರವಾರ ಟ್ವೀಟಿಸಿದ್ದಾರೆ.

ಸಿಂಗ್,ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಾಖಡ್,ಪಕ್ಷದ ಪಂಜಾಬ ಉಸ್ತುವಾರಿ ಹರೀಶ ರಾವತ್,ರಾಜ್ಯದ ಎಲ್ಲ ಸಚಿವರು ಮತ್ತು ಪಕ್ಷದ ಶಾಸಕರು ಪ್ರತಿಭಟನೆಗಳಲ್ಲಿ ಭಾಗಿಯಾಗಲಿದ್ದಾರೆ.

ಟ್ರಾಕ್ಟರ್ ರ್ಯಾಲಿಗಳು ಮೂರು ದಿನಗಳಲ್ಲಿ 50 ಕಿ.ಮೀ.ಗೂ ಹೆಚ್ಚು ಅಂತರವನ್ನು ಕ್ರಮಿಸಲಿವೆ. ಈ ವೇಳೆ ಎಲ್ಲ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಲಾಗುವುದು. ರಾಹುಲ್ ಗಾಂಧಿಯವರು ಅ.6ರಂದು ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಎರಡು ಕಡೆಗಳಲ್ಲಿ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ವಕ್ತಾರರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News