ಗನ್ ಲೈಸನ್ಸ್ ಬೇಡಿಕೆ ಇಟ್ಟ ಭೀಮ್ ಆರ್ಮಿ ಮುಖ್ಯಸ್ಥ ಆಝಾದ್

Update: 2020-10-04 09:29 GMT

 ಲಕ್ನೋ, ಅ.4: ಉತ್ತರಪ್ರದೇಶದ ಹತ್ರಸ್‌ನ ದಲಿತ ಯುವತಿಯ ಅತ್ಯಾಚಾರ ಹಾಗೂ ಹತ್ಯಾ ಪ್ರಕರಣ ಹಿನ್ನೆಲೆಯಲ್ಲಿ ಭೀಮ್ ಆರ್ಮಿಯ ಕಾರ್ಯಕರ್ತರು ಬಡ ವರ್ಗದವರಿಗೆ ಗನ್ ಲೈಸೆನ್ಸ್ ಬೇಡಿಕೆ ಇಟ್ಟಿದ್ದಲ್ಲದೆ ರಿಯಾಯಿತಿ ದರದಲ್ಲಿ ಗನ್ ಒದಗಿಸುವುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಸಂವಿಧಾನವು ಪ್ರತಿ ಪ್ರಜೆಗಳಿಗೆ ಜೀವಿಸುವ ಹಕ್ಕುಗಳನ್ನು ನೀಡಿದೆ. ಇದರಲ್ಲಿ ಆತ್ಮ ರಕ್ಷಣೆಯ ಹಕ್ಕುಗಳು ಸೇರಿವೆ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಝಾದ್ ತಿಳಿಸಿದ್ದಾರೆ.

"ದೇಶದ 20 ಲಕ್ಷ ಬಹು ಜನರಿಗೆ ತಕ್ಷಣವೇ ಗನ್ ಲೈಸನ್ಸ್‌ಗಳನ್ನು ನೀಡಬೇಕೆಂಬುದು ನಮ್ಮ ಬೇಡಿಕೆ. ಗನ್‌ಗಳನ್ನು ಹಾಗೂ ಪಿಸ್ತೂಲ್‌ಗಳನ್ನು ಖರೀದಿಸಲು ಸರಕಾರ ಶೇ.50 ಸಬ್ಸಿಡಿಯನ್ನು ಒದಗಿಸಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ'' ಎಂದು ಆಝಾದ್ ಟ್ವೀಟ್ ಮಾಡಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ಯುವತಿಯ ಅತ್ಯಾಚಾರ ಪ್ರಕರಣವನ್ನು ಹತ್ರಸ್ ಜಿಲ್ಲಾ ಪೊಲೀಸ್ ಹಾಗೂ ಆಡಳಿತ ನಿಭಾಯಿಸಿದ ರೀತಿಗೆ ಭಾರೀ ಟೀಕೆಗಳು ವ್ಯಕ್ತವಾದ ಬಳಿಕ ಆಝಾದ್ ಈ ಬೇಡಿಕೆ ಇಟ್ಟಿದ್ದಾರೆ.

ಎಸ್‌ಪಿ ಹಾಗೂ ಇತರ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಸಿಎಂ ಆದಿತ್ಯನಾಥ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಶಿಫಾರಸು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News