ಆಸ್ಪತ್ರೆಯಿಂದ ಹೊರಬಂದು ಬೆಂಬಲಿಗರತ್ತ ಕೈಬೀಸಿದ ಸೋಂಕಿತ ಟ್ರಂಪ್!
Update: 2020-10-05 22:21 IST
ವಾಶಿಂಗ್ಟನ್, ಅ. 5: ಕೊರೋನ ವೈರಸ್ ಸಾಂಕ್ರಾಮಿಕದ ಸೋಂಕಿಗೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರವಿವಾರ ತಾನು ಚಿಕಿತ್ಸೆ ಪಡೆಯುತ್ತಿರುವ ವಾಶಿಂಗ್ಟನ್‌ನ ವಾಲ್ಟರ್ ರೀಡ್ ಮಿಲಿಟರಿ ಮೆಡಿಕಲ್ ಸೆಂಟರ್‌ನಿಂದ ಸ್ವಲ್ಪ ಹೊತ್ತು ಹೊರಬಂದು ತನ್ನ ಬೆಂಬಲಿಗರನ್ನು ಭೇಟಿ ಮಾಡಿದ್ದಾರೆ.
ಆದರೆ, ಇದು ವೈದ್ಯಕೀಯ ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಂಪ್ ತನ್ನದೇ ಸರಕಾರದ ಸಾರ್ವಜನಿಕ ಆರೋಗ್ಯ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಆಸ್ಪತ್ರೆಯ ಹೊರಗೆ ಮಾಸ್ಕ್ ಧರಿಸಿ ಗುಂಡುನಿರೋಧಕ ಕಾರಿನಿಂದ ತನ್ನ ಬೆಂಬಲಿಗರತ್ತ ಟ್ರಂಪ್ ಕೈಬೀಸಿದರು.