ಕೊರೋನ ಲಸಿಕೆ ವರ್ಷದ ಕೊನೆಗೆ ಲಭ್ಯ: ವಿಶ್ವ ಆರೋಗ್ಯ ಸಂಸ್ಥೆ

Update: 2020-10-06 16:46 GMT
Photo: twitter.com/WHO

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 6: ಕೋವಿಡ್-19 ವಿರುದ್ಧದ ಲಸಿಕೆಯೊಂದು ವರ್ಷದ ಕೊನೆಯ ವೇಳೆಗೆ ಸಿದ್ಧಗೊಳ್ಳಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದ್ದಾರೆ.

‘‘ನಮಗೆ ಲಸಿಕೆಯ ಅಗತ್ಯವಿದೆ. ಮತ್ತು ಈ ವರ್ಷದ ಕೊನೆಯ ವೇಳೆಗೆ ನಾವು ಲಸಿಕೆಯೊಂದನ್ನು ಹೊಂದಬಹುದು ಎಂಬ ಭರವಸೆ ನಮಗಿದೆ’’ ಎಂದು ಸಂಸ್ಥೆಯ ಸಾಂಕ್ರಾಮಿಕ ಕುರಿತ ಕಾರ್ಯಕಾರಿ ಮಂಡಳಿಯ ಎರಡು ದಿನಗಳ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News