ಹಿಮಾಚಲ ಪ್ರದೇಶದ ವರ್ಜಿನ್ ಶಿಖರವೇರಿದ ಮೊದಲ ತೃತೀಯ ಲಿಂಗಿ ಸೌರವ್ ಕಿಟ್ಟು ಟಾಂಕ್

Update: 2020-10-07 14:55 GMT
 ಫೋಟೊ ಕೃಪೆ: Twitter.com

ಚಂಡಿಗಡ,ಅ.7: ಎಲ್‌ಜಿಬಿಟಿ ಸಮುದಾಯಕ್ಕೆ ಸೇರಿದ ಸೌರವ್ ಕಿಟ್ಟು ಟಾಂಕ್ ಅವರು ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿರುವ 6,000 ಮೀ.ಎತ್ತರದ ವರ್ಜಿನ್ ಶಿಖರವನ್ನೇರಿದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಶಿಖರ ಪ್ರದೇಶದಲ್ಲಿ ತಾಪಮಾನವು ಮೈನಸ್ 15 ಡಿ.ಸೆ.ಮಟ್ಟಕ್ಕೆ ಕುಸಿಯುತ್ತದೆ.

 ಹೆತ್ತವರಿಂದ ತ್ಯಜಿಸಲ್ಪಟ್ಟಿದ್ದ ಸೌರವ್ ಅವರನ್ನು ಚಂಡಿಗಡದ ಮಂಗಳಮುಖಿ ತೃತೀಯ ಲಿಂಗಿ ಕಲ್ಯಾಣ ಸಂಘದ ಸ್ಥಾಪಕಿ ಕಾಜಲ್ ಮಂಗಳಮುಖಿ ಅವರು ಪೋಷಿಸಿದ್ದರು. ‘ಸೌರವ್ ಸಾಧನೆ ನಮಗೆಲ್ಲ ಹೆಮ್ಮೆಯನ್ನುಂಟು ಮಾಡಿದೆ. ಆತ ಅತ್ಯಂತ ವಿಶೇಷ ಹುಡುಗನಾಗಿದ್ದು,ಏನಾದರೂ ಅಸಾಧಾರಣವಾದುದನ್ನು ಸಾಧಿಸಲು ಸದಾ ಬಯಸಿದ್ದ ’ಎಂದು ತಿಳಿಸಿದ ಮಂಗಳಮುಖಿ, ಒಂದಲ್ಲ ಒಂದು ದಿನ ಆತ ಹಿಮಾಲಯದ ಶಿಖರವನ್ನು ಏರುತ್ತಾನೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಅ.2ರಂದು ಈ ಸಾಧನೆಯನ್ನು ಮಾಡಿರುವ ಸೌರವ್ ಅವರನ್ನು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News