ಕೋವಿಡ್-19:ವಿವಿಗಳಿಂದ ಕೇವಲ ಶಿಕ್ಷಣ ಶುಲ್ಕ ವಸೂಲಿ ಕೋರಿದ್ದ ಅರ್ಜಿಗೆ ಹೈಕೋರ್ಟ್ ತಿರಸ್ಕಾರ

Update: 2020-10-07 15:08 GMT

 ಹೊಸದಿಲ್ಲಿ,ಅ.7: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿವಿಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಕೇವಲ ಶಿಕ್ಷಣ ಶುಲ್ಕಗಳನ್ನು,ಅದೂ ಕಂತುಗಳಲ್ಲಿ ಪಡೆದುಕೊಳ್ಳಲು ನಿರ್ದೇಶ ಕೋರಿ ನಾಲ್ಕನೆಯ ವರ್ಷದ ಕಾನೂನು ವಿದ್ಯಾರ್ಥಿಯೋರ್ವ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ. ರಿಯಾಯಿತಿಗಳು ಹಕ್ಕಿನ ವಿಷಯಗಳಲ್ಲ ಎಂದು ಅದು ತಿಳಿಸಿದೆ.

ಆದರೆ ಅರ್ಜಿಯನ್ನು ಪ್ರಾತಿನಿಧಿಕ ಎಂದು ಪರಿಗಣಿಸುವಂತೆ ಮತ್ತು ಪ್ರಕರಣದಲ್ಲಿಯ ಅಂಶಗಳಿಗೆ ಅನ್ವಯವಾಗುವ ಕಾನೂನು,ನಿಯಮಗಳು ಮತ್ತು ಸರಕಾರದ ನೀತಿಗೆ ಅನುಗುಣವಾಗಿ ನಿರ್ಧಾರವೊಂದನ್ನು ಕೈಗೊಳ್ಳುವಂತೆ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ನೇತೃತ್ವದ ಪೀಠವು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿತು.

ಅಲ್ಪಾವಧಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವು,ವಿವಿಗಳು ತಮ್ಮ ಸಿಬ್ಬಂದಿಗಳಿಗೆ ವೇತನಗಳನ್ನು ನೀಡಬೇಕು,ಜೊತೆಗೆ ಆನ್‌ಲೈನ್ ತರಗತಿಗಳಿಗಾಗಿ ಮೂಲಸೌಕರ್ಯಗಳನ್ನೂ ಸ್ಥಾಪಿಸಬೇಕು. ಆದ್ದರಿಂದ ಶುಲ್ಕಗಳಲ್ಲಿ ರಿಯಾಯಿತಿಗಳನ್ನು ನೀಡುವಂತೆ ಅವುಗಳಿಗೆ ನಿರ್ದೇಶ ನೀಡುವಂತಿಲ್ಲ ಎಂದು ಹೇಳಿತು.

 ವಿವಿಗಳಿಂದ ವಿದ್ಯಾರ್ಥಿಗಳಿಗೆ ಗ್ಯಾಜೆಟ್‌ಗಳು ಮತ್ತು 4ಜಿ ಇಂಟರ್‌ನೆಟ್ ಪ್ಯಾಕ್‌ಗಳಂತಹ ವಿವಿಧ ಸೌಲಭ್ಯಗಳ ಪೂರೈಕೆಯ ಬೇಡಿಕೆಯನ್ನು ತಳ್ಳಿಹಾಕಿದ ಪೀಠವು,ಕೇಳುವುದರಿಂದ ಹಾನಿಯೇನಿಲ್ಲ. ನೀವು ಸ್ವರ್ಗ ಮತ್ತು ಆಕಾಶವನ್ನೂ ಕೇಳಬಹುದು. ವಿದ್ಯಾರ್ಥಿಗಳು ಕಾಲೇಜು/ವಿವಿಗೂ ಹೋಗಬೇಕಿರುವುದರಿಂದ ಅವರಿಗಾಗಿ ಸೈಕಲ್‌ಗಳು ಮತ್ತು ಕಾರುಗಳನ್ನೇಕೆ ಕೇಳಿಲ್ಲ ಎಂದು ಅರ್ಜಿದಾರರನ್ನು ವ್ಯಂಗ್ಯವಾಗಿ ಪ್ರಶ್ನಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News