ಕೊರೋನಕ್ಕೆ ಚೀನಾ ದೊಡ್ಡ ಬೆಲೆ ತೆರಬೇಕಾಗುತ್ತದೆ: ಟ್ರಂಪ್ ಎಚ್ಚರಿಕೆ

Update: 2020-10-08 16:40 GMT

ವಾಶಿಂಗ್ಟನ್, ಅ. 8: ಕೊರೋನ ವೈರಸನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿರುವುದಕ್ಕಾಗಿ ಚೀನಾ ದೊಡ್ಡ ಬೆಲೆಯೊಂದನ್ನು ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಕೊರೋನ ವೈರಸ್‌ಗೆ ಚಿಕಿತ್ಸೆ ಪಡೆದು ವಾಶಿಂಗ್ಟನ್‌ನ ಸೇನಾ ಆಸ್ಪತ್ರೆಯಿಂದ ಶ್ವೇತಭವನಕ್ಕೆ ಮರಳಿದ ಬಳಿಕ ಟ್ವಿಟರ್‌ನಲ್ಲಿ ಹಾಕಿದ ವೀಡಿಯೊ ಸಂದೇಶದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

 ಅಮೆರಿಕದಲ್ಲಿ ಕೊರೋನ ವೈರಸ್‌ನಿಂದಾಗಿ 2,11,793ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 75,49,429ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅಮೆರಿಕವು ಜಗತ್ತಿನಲ್ಲೇ ಕೊರೋನ ವೈರಸ್‌ನಿಂದಾಗಿ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ.

‘‘ಕೊರೋನ ವೈರಸ್ ಜಗತ್ತಿನಾದ್ಯಂತ ಹರಡಿರುವುದಕ್ಕೆ ಚೀನಾ ಕಾರಣ. ನಮ್ಮ ದೇಶ ಅಮೆರಿಕಕ್ಕೆ ಒದಗಿರುವ ಪರಿಸ್ಥಿತಿಗೆ ಚೀನಾವು ದೊಡ್ಡ ಬೆಲೆಯನ್ನು ತೆರಲಿದೆ. ಇಡೀ ಜಗತ್ತಿಗೆ ಒದಗಿರುವ ಪರಿಸ್ಥಿತಿಗೆ ಚೀನಾವು ದೊಡ್ಡ ಬೆಲೆಯನ್ನು ತೆರಲಿದೆ. ಇದು ಚೀನಾದ ತಪ್ಪು. ಅದನ್ನು ನೆನಪಿಡಿ’’ ಎಂದು ವೀಡಿಯೊ ಸಂದೇಶದಲ್ಲಿ ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News