ಟಿಆರ್‌ಪಿ ತಿರುಚಿದ ಪ್ರಕರಣ: ನಿರ್ದಿಷ್ಟ ಚಾನೆಲ್ ನೋಡಲು ಹಣ ನೀಡುತ್ತಿದ್ದರು; ಸಾಕ್ಷಿ

Update: 2020-10-09 15:44 GMT
ಸಾಂದರ್ಭಿಕ ಚಿತ್ರ

ಮುಂಬೈ, ಅ. 9: ಟಿಆರ್‌ಪಿ ತಿರುಚಿದ್ದಕ್ಕಾಗಿ ರಿಪಬ್ಲಿಕ್ ಟಿ.ವಿ. ಹಾಗೂ ಇತರ ಎರಡು ಚಾನೆಲ್‌ಗಳ ವಿರುದ್ಧ ಮುಂಬೈ ಪೊಲೀಸರು ತನಿಖೆ ನಡೆಸುವುದಾಗಿ ಘೋಷಿಸಿದ ಬಳಿಕ, ತನ್ನ ಮನೆಯಲ್ಲಿ ವೀಕ್ಷಕ ಸಂಖ್ಯೆಯನ್ನು ಪರಿಶೀಲಿಸುವ ‘ಪೀಪಲ್ ಮೀಟರ್’ ಹೊಂದಿರುವ ವ್ಯಕ್ತಿಯೋರ್ವ, ನಿರ್ದಿಷ್ಟ ಚಾನೆಲ್ ವೀಕ್ಷಿಸುವುದಕ್ಕೆ ತಾನು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಸ್ವೀಕರಿಸುತ್ತಿದ್ದೇವೆ ಎಂದಿದ್ದಾನೆ.

ಚಾನೆಲ್‌ಗಳಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಪೊಲೀಸರು ಹೇಳಲಾಗುವ ಮೂವರು ಸಾಕ್ಷಿಗಳಲ್ಲಿ ಓರ್ವ, ತನ್ನ ನಿವಾಸದಲ್ಲಿ ಅಳವಡಿಸಿರುವ ಮೀಟರ್ ಬಿಲ್ ಅನ್ನು ನಿರ್ವಹಿಸುತ್ತದೆ ಹಾಗೂ ಡಿಟಿಎಚ್ ಸ್ವಯಂಚಾಲಿತವಾಗಿ ರೀಚಾರ್ಜ್ ಆಗುತ್ತದೆ ಎಂದಿದ್ದಾನೆ. ಬಾರ್-ಒ-ಮೀಟರ್‌ನ ಕಾರ್ಯ ನಿರ್ವಾಹಕ ‘ಬಾಕ್ಸ್ ಸಿನೆಮಾ’ (ತನಿಖೆಗೆ ಒಳಪಟ್ಟಿರುವ ಮೂರು ಚಾನೆಲ್‌ಗಳಲ್ಲಿ ಒಂದು) ನೋಡುವಂತೆ ನನಗೆ ತಿಳಿಸಿದ್ದ. ನಾನು ಅಪರಾಹ್ನ 2 ಗಂಟೆಯಿಂದ 4 ಗಂಟೆ ವರೆಗೆ ಈ ಚಾನೆಲ್ ಅನ್ನು ನೋಡಬೇಕು ಎಂದು ಸೂಚಿಸಿದ್ದ. ಅದಕ್ಕೆ 500 ರೂಪಾಯಿ ಪಾವತಿಸಿದ್ದ ಎಂದು ವೀಕ್ಷಕ ಹೇಳಿದ್ದಾನೆ. ನಾನು ಇದನ್ನು ಕಳೆದ ಎರಡು ಮೂರು ವರ್ಷಗಳಿಂದ ಮಾಡುತ್ತಿದ್ದೇನೆ. ಇದು ಟಿಆರ್‌ಪಿ ತಿರುಚುವುದು ಎಂದು ನನಗೆ ಗೊತ್ತಿರಲಿಲ್ಲ ಎಂದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News