ಪಂಜಾಬ್ ವಿವಿಯ ಮಾಜಿ ವಿದ್ಯಾರ್ಥಿ ನಾಯಕನ ಗುಂಡಿಕ್ಕಿ ಹತ್ಯೆ

Update: 2020-10-11 14:17 GMT

ಚಂಡಿಗಡ: ಪಂಜಾಬ್ ವಿವಿಯ ಮಾಜಿ ವಿದ್ಯಾರ್ಥಿ ನಾಯಕನನ್ನು ಅಪರಿಚಿತ ಶಸ್ತ್ರ ಸಜ್ಜಿತ ಹಂತಕರು ನೈಟ್ ಕ್ಲಬ್ ನ ಹೊರಗಡೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಸಂತ್ರಸ್ತ ಗುರುಲಾಲ್ ಬ್ರಾರ್ ನೈಟ್ ಕ್ಲಬ್ ಹೊರಗಡೆ ನಿಂತಿದ್ದಾಗ ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುಲಾಲ್ ಅವರು ಪಂಜಾಬ್ ಮೂಲದವರು, ಪ್ರಸ್ತುತ ಅವರು ಮೊಹಾಲಿಯಲ್ಲಿ ವಾಸಿಸುತ್ತಿದ್ದರು. ಘಟನೆಯ ಬಳಿಕ  ಅವರನ್ನು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News