ಪಿ.ವಿ.ಸಿಂಧುಗೆ ವರ್ಲ್ಡ್ ಟೂರ್‌ಗೆ ನೇರ ಪ್ರವೇಶವಿಲ್ಲ

Update: 2020-10-12 18:49 GMT

ಹೊಸದಿಲ್ಲಿ: ಮುಂದಿನ ವರ್ಷದ ಜನವರಿಯಲ್ಲಿ ನಡೆಯ ಲಿರುವ ವರ್ಲ್ಡ್ ಟೂರ್ ಫೈನಲ್ಸ್ ನಲ್ಲಿ ಬ್ಯಾಡ್ಮಿಂಟನ್ ವರ್ಲ್ಡ್‌ಚಾಂಪಿಯನ್ ಭಾರತದ ಪಿ.ವಿ.ಸಿಂಧುಗೆ ನೇರ ಪ್ರವೇಶ ಇಲ್ಲದಾಗಿದೆ. ವರ್ಲ್ಡ್ ಚಾಂಪಿಯನ್‌ಗಳಿಗೆ ನೇರ ಪ್ರವೇಶ ನೀಡದಿರಲು ಬ್ಯಾಡ್ಮಿಂಟನ್ ವರ್ಲ್ಡ್‌ಫೆಡರೇಶನ್ (ಬಿಡಬ್ಲುಎಫ್) ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಸಿಂಧು ಅವರು ಮರು ನಿಗದಿಪಡಿಸಿದ ವಿಶ್ವ ಟೂರ್ ಫೈನಲ್ಸ್‌ನಲ್ಲಿ ನೇರ ಪ್ರವೇಶ ವಂಚಿತಗೊಂಡಿದ್ದಾರೆ.

ಬಿಡಬ್ಲುಎಫ್ ನಿಯಮಗಳ ಪ್ರಕಾರ ವಿಶ್ವ ಚಾಂಪಿಯನ್‌ಗಳು ಯಾವಾಗಲೂ ಪ್ರತಿಷ್ಠಿತ ವಿಶ್ವ ಟೂರ್ ಫೈನಲ್ಸ್‌ಗೆ ನೇರ ಅರ್ಹತೆಯನ್ನು ಪಡೆಯುತ್ತಾರೆ. ಆದರೆ ಕೋವಿಡ್ -19ಸಾಂಕ್ರಾಮಿಕ ರೋಗವು ಅಂತರ್‌ರಾಷ್ಟ್ರೀಯ ಬ್ಯಾಡ್ಮಿಂಟನ್ ವೇಳಾಪಟ್ಟಿಗೆ ಅಡ್ಡಿಪಡಿಸಿ ರುವುದರಿಂದ ಬಿಡಬ್ಲುಎಫ್ ಈ ವರ್ಷದ ಮಾನದಂಡಗಳನ್ನು ದೂರ ಮಾಡಲು ನಿರ್ಧರಿಸಿದೆ. ವರ್ಲ್ಡ್ ಟೂರ್ ಫೈನಲ್ಸ್ 2021, ಜನವರಿ 27ರಿಂದ 31ರ ತನಕ ನಡೆಯಲಿದೆ. ಈಗಿನ ನಿಯಮಗಳ ಪ್ರಕಾರ ಥಾಯ್‌ಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುವ ಎಚ್‌ಎಸ್‌ಬಿಸಿ ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್‌ಗೆವಿಶ್ವ ಟೂರ್ ಟೂರ್ನಮೆಂಟ್‌ನಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬಿಡಬ್ಲುಎಫ್ ರವಿವಾರ ಹೇಳಿಕೆಯಲ್ಲಿ ತಿಳಿಸಿದೆ.

  ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದ ಸಿಂಧು ಡೆನ್ಮಾರ್ಕ್ ಓಪನ್‌ನಿಂದ ಹೊರಗುಳಿದಿದ್ದರು. ಈ ಕಾರಣದಿಂದಾಗಿ ಅವರು ವಿಶ್ವ ಟೂರ್ ಫೈನಲ್ಸ್‌ಗೆ ಪ್ರವೇಶ ಪಡೆಯಲು ಏಶ್ಯ ಲೆಗ್‌ನಲ್ಲಿ ಪ್ರದರ್ಶನ ನೀಡಬೇಕಾಗುತ್ತದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News